HomeKarnataka Newsಚಿಕ್ಕಮಗಳೂರಿನ ಹಲವೆಡೆ ಇಂದಿನಿಂದ 2 ದಿನ ಮದ್ಯ ಮಾರಾಟ ಬಂದ್! ಯಾಕೆ?

ಚಿಕ್ಕಮಗಳೂರಿನ ಹಲವೆಡೆ ಇಂದಿನಿಂದ 2 ದಿನ ಮದ್ಯ ಮಾರಾಟ ಬಂದ್! ಯಾಕೆ?

For Dai;y Updates Join Our whatsapp Group

ಚಿಕ್ಕಮಗಳೂರು:- ಚಿಕ್ಕಮಗಳೂರಿನ ಹಲವೆಡೆ ಇಂದಿನಿಂದ 2 ದಿನ ಮದ್ಯಮಾರಾಟ ಬಂದ್ ಮಾಡಲಾಗಿದೆ.

ಇನಾಂ ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ಅಂಗವಾಗಿ ಜಿಲ್ಲೆಯ ಹಲವೆಡೆ ಇಂದಿನಿಂದ 2 ದಿನ ಮದ್ಯಮಾರಾಟ ಬಂದ್ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್​ ಆದೇಶ ಹೊರಡಿಸಿದ್ದಾರೆ.

ಅದರಂತೆ ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಕೊಪ್ಪ, ಎನ್ಆರ್​​ಪುರ, ತರೀಕೆರೆ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ.

ಇಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ನಾಳೆ ದತ್ತ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದರ್ಶನ ಇರಲಿದೆ.

ಇನ್ನೂ ದತ್ತಜಯಂತಿ ಭದ್ರತೆಗಾಗಿ ರಾಜ್ಯದಾದ್ಯಂತ ವಿವಿಧೆಡೆಗಳಿಂದ ಪೊಲೀಸರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಇದೀಗ ಚಿಕ್ಕಮಗಳೂರು ನಗರ ಸೇರಿದಂತೆ ಚಂದ್ರದ್ರೋಣ ಪರ್ವತ ಭಾಗದಲ್ಲಿ ತುಂತುರು ಮಳೆ, ಚಳಿ ಹೆಚ್ಚಾಗಿರುವುದು ಅವರಿಗೆ ಸಮಸ್ಯೆ ತಂದೊಡ್ಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img