HomeKarnataka Newsಬೀದರ್ ವಾಹನ ಸವಾರರೇ ಹುಷಾರ್! ಎಐ ಕ್ಯಾಮೆರಾದಲ್ಲಿ ಸೆರೆಯಾದ್ರೆ ಮನೆ ಬಾಗಿಲಿಗೆ ಬರುತ್ತೆ ದಂಡದ ನೋಟಿಸ್

ಬೀದರ್ ವಾಹನ ಸವಾರರೇ ಹುಷಾರ್! ಎಐ ಕ್ಯಾಮೆರಾದಲ್ಲಿ ಸೆರೆಯಾದ್ರೆ ಮನೆ ಬಾಗಿಲಿಗೆ ಬರುತ್ತೆ ದಂಡದ ನೋಟಿಸ್

For Dai;y Updates Join Our whatsapp Group

ಬೀದರ್: ನಗರದ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ಬೀದರ್ ಸಂಚಾರಿ ಪೊಲೀಸರು ಹೈಟೆಕ್ ಕಣ್ಗಾವಲು ಆರಂಭಿಸಿದ್ದಾರೆ.

ನಗರದ ಪ್ರಮುಖ ಪ್ರವೇಶ ಮಾರ್ಗಗಳಲ್ಲಿ ಅಳವಡಿಸಿರುವ ಎಐ ಕ್ಯಾಮೆರಾಗಳು ವಾಹನಗಳ ಸಂಚಾರವನ್ನು ನಿರಂತರವಾಗಿ ಗಮನಿಸುತ್ತಿವೆ.

ನೌಬಾದ್ ಸಂಪರ್ಕ ರಸ್ತೆ, ಭಾಲ್ಕಿ ಮುಖ್ಯ ರಸ್ತೆ, ಹುಮನಾಬಾದ್-ಕಮಠಾಣ ರಸ್ತೆ ಹಾಗೂ ಔರಾದ ರಸ್ತೆ ಸೇರಿದಂತೆ ನಗರದ ನಾಲ್ಕು ಪ್ರಮುಖ ದಿಕ್ಕುಗಳ ಪ್ರವೇಶ ಮಾರ್ಗಗಳಲ್ಲಿ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಜೂನ್ 6ರಿಂದ ಸೆಪ್ಟೆಂಬರ್ 26ರವರೆಗೆ ಈ ಕ್ಯಾಮೆರಾಗಳ ಮೂಲಕ ಒಟ್ಟು 8,102 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೆ ತರಲಾಗಿದೆ.

ವಾಹನದ ನಂಬರ್ ಪ್ಲೇಟ್‌ಗಳನ್ನು ಸ್ಕ್ಯಾನ್ ಮಾಡುವ ಎಐ ಕ್ಯಾಮೆರಾಗಳು, ವಾಹನ ತಂತ್ರಾಂಶದ ಮೂಲಕ ಮಾಲೀಕರ ಮಾಹಿತಿಯನ್ನು ಪತ್ತೆಹಚ್ಚುತ್ತವೆ. ನಿಯಮ ಉಲ್ಲಂಘನೆ ದೃಶ್ಯದ ಡಿಜಿಟಲ್ ಫೋಟೋ ಸಾಕ್ಷ್ಯದೊಂದಿಗೆ ದಂಡದ ನೋಟಿಸ್‌ನ್ನು ವಾಹನ ಮಾಲೀಕರ ವಿಳಾಸಕ್ಕೆ ಕಳುಹಿಸಲಾಗುತ್ತದೆ.

ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸುವುದು ಹಾಗೂ ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿದಂತೆ ಹಲವು ಉಲ್ಲಂಘನೆಗಳನ್ನು ಕ್ಯಾಮೆರಾಗಳು ಪತ್ತೆಹಚ್ಚುತ್ತಿವೆ.

ಇನ್ನು ನಗರದ ಇತರೆ ಪ್ರಮುಖ ರಸ್ತೆ ಮತ್ತು ಪ್ರದೇಶಗಳಲ್ಲೂ ಎಐ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಮುಂದುವರಿದಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ರಸ್ತೆ ಅಪಘಾತ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಈ ವ್ಯವಸ್ಥೆಗೆ ವಾಹನ ಸವಾರರು ಸಹಕರಿಸಬೇಕು ಎಂದು ಬೀದರ್ ಸಂಚಾರಿ ಠಾಣೆಯ ಸಿಪಿಐ ಸಂಗಮೇಶ ಜಿ. ಮನವಿ ಮಾಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img