HomeGadag Newsಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಂಜಯ ನೀಲಗುಂದ

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ: ಸಂಜಯ ನೀಲಗುಂದ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದಲ್ಲಿ ಎಂದಿಗೂ ಮುಂದೆಯೇ ಇವೆ ಎಂದು ಸಂಜಯ ನೀಲಗುಂದ ಹೇಳಿದರು.

ಅವರು ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ (ಡಿಪಿಇಪಿ)ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿ, ನಮ್ಮ ಮಾತೃಭಾಷೆ ಕನ್ನಡ. ಆ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಶಾಲೆಗಳ ಪಾತ್ರ ಬಹು ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪಾಲಕರ -ಸಹಕಾರ ತುಂಬಾ ಅಗತ್ಯವಾಗಿದೆ. ಮಕ್ಕಳು ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಗತ್ಯವಿದೆ ಎಂದರು.

ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಾಹಾಂತೇಶ ಕೆಂಚನಾಯ್ಕರ್ ವಹಿಸಿದ್ದರು. ಪ.ಪಂ ಸದಸ್ಯ ಮಾಹಾಂತೇಶ ನೀಲಗುಂದ, ಮಹಾದೇವಪ್ಪಾ ಗಡಾದ, ಎ.ಎಚ್. ದುರ್ಗಿಗುಡಿ, ಎನ್.ಎಸ್. ಕರಿಗೂಳಪ್ಪನವರ, ಜೆ.ಜಿ. ಈರಗಾರ, ಹನುಮಂತಪ್ಪ ಹಗ್ಗದ, ಮಾಹಾಂತೇಶ ಬಳ್ಳಾರಿ, ಮಾಹಾದೇವಪ್ಪಾ ವಿಜಾಪೂರ, ಗಂಗಪ್ಪಾ ಸುಂಕಾಪೂರ, ಮಹೇಶ ನೀಲಗುಂದ ಮುಂತಾದವರಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img