HomeGadag Newsಶೂಟಿಂಗ್ ಸ್ಪರ್ಧೆಯಲ್ಲಿ ಸಿದ್ದಾರ್ಥ ಎಮ್.ಬಡ್ನಿ ಪ್ರಥಮ ಸ್ಥಾನ

ಶೂಟಿಂಗ್ ಸ್ಪರ್ಧೆಯಲ್ಲಿ ಸಿದ್ದಾರ್ಥ ಎಮ್.ಬಡ್ನಿ ಪ್ರಥಮ ಸ್ಥಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಕೆಎಲ್‌ಇ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಸಿದ್ದಾರ್ಥ ಎಮ್.ಬಡ್ನಿ ಕೇರಳದ ಸಾಯಿಕೃಷ್ಣ ಪಬ್ಲಿಕ್ ಶಾಲೆ ಚನಕಲ್‌ನಲ್ಲಿ ಸೆ. 25ರಿಂದ ಸೆ. 28ರವರೆಗೆ ನಡೆದ ಸಿಬಿಎಸ್‌ಇ ಸೌಥ್ ಝೋನ್-2 ಶೂಟಿಂಗ್ ಸ್ಪರ್ಧೆ-2024ರಲ್ಲಿ ಭಾಗವಹಿಸಿ 376 ಅಂಕ ಗಳಿಸುವುದರ ಮೂಲಕ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದು, ಮುಂಬರುವ ರಾಷ್ಟ್ರಮಟ್ಟದ ಸಿಬಿಎಸ್‌ಇ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಸಾಧಕ ವಿದ್ಯಾರ್ಥಿಗೆ ಮತ್ತು ತರಬೇತಿ ನೀಡಿದ ಬಸವರಾಜ ಹೊಂಬಾಳಿ ಅವರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಶಾಲಾ ಸಂಯೋಜಕರು, ಪ್ರಾಂಶುಪಾಲರು ಹಾಗೂ ಸರ್ವ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img