HomeGadag Newsರಾಜ್ಯಮಟ್ಟದ ಕಾರ್ಯಾಗಾರದ ಪೂರ್ವಭಾವಿ ಸಭೆ

ರಾಜ್ಯಮಟ್ಟದ ಕಾರ್ಯಾಗಾರದ ಪೂರ್ವಭಾವಿ ಸಭೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಡಂಬಳ ನಾಕಾದ ಹತ್ತಿರವಿರುವ ನಂದಿವೇರಿ ಸಂಸ್ಥಾನ ಮಠದಲ್ಲಿ ಔಷಧೀಯ ಸಸ್ಯ ಬೆಳೆಗಾರರ ಸಮಸ್ಯೆಗಳ ಕುರಿತು ರೈತ ಸಂವಾದ ಮತ್ತು ಹುಬ್ಬಳ್ಳಿಯಲ್ಲಿ ಜೂ. 8, 9ರಂದು ಜರುಗಲಿರುವ ಔಷಧೀಯ ಸಸ್ಯಗಳ ಜೀವ ವೈವಿಧ್ಯತೆ ಸಂರಕ್ಷಣೆ, ಕೃಷಿ ಹಾಗೂ ಆರೋಗ್ಯ ರಕ್ಷಣೆಯಲ್ಲಿ ಔಷಧೀಯ ಸಸ್ಯಗಳ ಉಪಯೋಗ ಕುರಿತ ರಾಜ್ಯಮಟ್ಟದ ಕಾರ್ಯಾಗಾರದ ಪೂರ್ವಭಾವಿ ಸಭೆಯಲ್ಲಿ ರೈತರೊಂದಿಗೆ ಸಂವಾದ ನಡೆಯಿತು.

ಈ ಸಂದರ್ಭದಲ್ಲಿ ಬೆಂಗಳೂರಿನ ಎಮ್.ಎಸ್. ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತç ವಿಭಾಗದ ಮುಖ್ಯಸ್ಥ ಹಾಗೂ ಕರ್ನಾಟಕದಲ್ಲಿ ಕೃಷಿ ಆಶ್ರಮ ಆಂದೋಲನದ ರೂವಾರಿ ಡಾ. ಬಿ.ಎಂ. ನಾಗಭೂಷಣ ರೈತರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾತನಾಡಿ, ಉತ್ತಮ ತಳಿಯ ಅಯ್ಕೆ, ಔಷಧಿ ಪ್ರಮಾಣ ಕಡಿಮೆ ಇರುವ ಸಸಿ, ನಾಟಿ ಮಾಡುವಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರಲ್ಲದೆ, ರೈತರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜೂ. 8 ಮತ್ತು 9ರಂದು ರಾಜ್ಯಮಟ್ಟದ ಕಾರ್ಯಾಗಾರವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಡಾ. ಆರ್.ಎಫ್. ಇಂಚಲ್ ಮಾತನಾಡಿ, ಔಷಧೀಯ ಸಸ್ಯಗಳನ್ನು ಉಳಿಸಿ, ಬಳಸಿ, ಬೆಳೆಸುವುದೇ ನಮ್ಮ ಉಸಿರಾಗಬೇಕು. ಮುಂಬರುವ ದಿನಗಳಲ್ಲಿ ಕಡಿಮೆ ಅವಧಿಯ, ಕಡಿಮೆ ವೆಚ್ಚದ, ಹೆಚ್ಚು ಉತ್ಪಾದನೆ ಮಾಡಬಹುದಾದ, ಹೆಚ್ಚು ಬೆಲೆ ದೊರಕಿಸುವ ಹಾಗೂ ಅಪರೂಪದ ಔಷಧೀಯ ಸಸ್ಯಗಳ ಬೆಳೆಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯ ಡಾ. ಚರಂತಯ್ಯ ಹಿರೇಮಠ ಮಾತನಾಡಿ, ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಆಯುರ್ವೇದ ಪದ್ಧತಿಯಲ್ಲಿ ಬಳಕೆ ಆಗುವ ಸಸ್ಯಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಕಪ್ಪತಗುಡ್ಡದ ಶ್ರೀ ನಂದಿವೇರಿ ಸಂಸ್ಥಾನಮಠದ ಪೂಜ್ಯಶ್ರೀ ಶಿವಕಮಾರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಾಲಚಂದ್ರ ಜಾಬಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನಿಸರ್ಗದ ಪ್ರತಿಯೊಂದು ಸಸ್ಯಗಳೂ ಔಷದೀಯ ಗುಣಗಳನ್ನು ಹೊಂದಿವೆ. ಕಪ್ಪತಗುಡ್ಡದ ಶಿವಕುಮಾರ ಮಹಾಸ್ವಾಮಿಗಳು ಔಷಧೀಯ ಸಸ್ಯಗಳ ಕುರಿತು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದಾರೆ. 80 ಸಾವಿರ ಎಕರೆ ವಿಸ್ತೀರ್ಣವುಳ್ಳ ಕಪ್ಪತಗುಡ್ಡದ ಪರಿಸರದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲು ಸಾಕಷ್ಟು ಅವಕಾಶ ಮತ್ತು ಅನುಕೂಲಗಳಿವೆ.
– ಸುರೇಶ ಕುಂಬಾರ.
ತೋಟಗಾರಿಕೆ ಇಲಾಖೆ.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img