ಅಗರಬತ್ತಿ ಮಾರುತ್ತಲೇ ಪಿಎಸ್‌ಐ ಆದ ಅತ್ತರವಾಲಾ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ: ಓದಿನ ನಡುವೆ ಕುಟುಂಬ ನಿರ್ವಹಣೆಗಾಗಿ ಊರೂರು ಸುತ್ತಿ ಅಗರಬತ್ತಿ ಮಾರುತ್ತಿದ್ದ ಯುವಕ ಈಗ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾನೆ.
ಪಟ್ಟಣದ ಸಾಗರ್ ಅತ್ತರವಾಲಾ ಶುಕ್ರವಾರ ಬಿಡುಗಡೆಯಾದ ಪಿಎಸ್‌ಐ ಫಲಿತಾಂಶದಲ್ಲಿ ರಾಜ್ಯಕ್ಕೆ 173ನೇ ರ‍್ಯಾಂಕ್ ಗಳಿಸುವ ಮೂಲಕ ಪೊಲೀಸ್ ಇಲಾಖೆ ಸೇರುತ್ತಿದ್ದಾನೆ.

Advertisement

ದಿನ ನಿತ್ಯದ ಕುಟುಂಬ ನಿರ್ವಹಣೆ ಮಾಡುವುದೇ ಇಂದಿನ ದಿನಮಾನಗಳಲ್ಲಿ ಕಷ್ಟವಾಗಿರುವಾಗ ಕಡುಬಡತನದಲ್ಲಿ ಬಂದ ಸಾಗರ್ ಅತ್ತರವಾಲಾ ರಾಜ್ಯಕ್ಕೆ 173ನೇ ರ‍್ಯಾಂಕ್ ಪಡೆದು ಪಿಎಸ್‌ಐ ನೇಮಕವಾಗಿ ಮುಂಡರಗಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ.

ಎರಡು ತಿಂಗಳು ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಶಿಯರ್ ಆಗಿ ಸರ್ಕಾರಿ ಹುದ್ದೆಯಲ್ಲಿ ಸಾಗರ್ ಕೆಲಸ ಮಾಡಿದ್ದ. ಪಿಎಸೈ ಪರೀಕ್ಷೆಗಾಗಿ ಓದಲು ಸಮಯ ಸಿಗದ್ದರಿಂದ ನೌಕರಿಗೆ ರಾಜೀನಾಮೆ ಸಲ್ಲಿಸಿ ಅಬ್ಯಾಸ ಮಾಡಿ ಗೆದ್ದಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೇ ಹಿಂದುಳಿದ ಮುಂಡರಗಿ ಪಟ್ಟಣದಲ್ಲಿ ಲಭ್ಯವಿರುವ ಪಠ್ಯ ಸಂಪನ್ಮೂಲಗಳನ್ನು ಅಭ್ಯಸಿಸಿ ಈ ಪರೀಕ್ಷೆಯಲ್ಲಿ 173ನೇ ರ‍್ಯಾಂಕ್ ಪಡೆದಿದ್ದಾನೆ. ಕೆಲವೊಮ್ಮೆ ತಂದೆಗೆ ನೆರವಾಗಲು ಅಗರಬತ್ತಿ ಮಾರುವ ಕೆಲಸವನ್ನೂ ನಿರ್ವಹಿಸುತ್ತಲೇ ಪಿಎಸ್‌ಐ ಆಗಿರುವುದು ಆತನ ಛಲಕ್ಕೆ ನಿದರ್ಶನವಾಗಿದೆ.

ಸಂಸಾರ ನೌಕೆ ಸಾಗಿಸಲು ಕಷ್ಟವಾದ ಸಂದರ್ಭದಲ್ಲೂ ಮಗನ ಓದಿಗೆ ತೊಂದರೆಯಾಗದಂತೆ ತಂದೆ-ತಾಯಿ ನೋಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಸಾಗರ್, ಚಿಕ್ಕಂದಿನಿಂದಲೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಹಿಸುವ ಬಯಕೆಯಿತ್ತು. ಬಡತನದಲ್ಲೂ ತಂದೆ, ತಾಯಿ ನನ್ನ ಓದಿಗೆ ಬೆಂಬಲ ನೀಡಿದ್ದಾರೆ. ಈಗ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಪ್ರಾಮಾಣಿಕ ಸೇವೆ ಸಲ್ಲಿಸುವ ಗುರಿ ಹೊಂದಿದ್ದಾನೆ ಎಂದಿದ್ದಾನೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರಿನ ಸಹನಾ ಪಾಟೀಲಳಂತೆ ಸಾಗರನೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.


Spread the love

LEAVE A REPLY

Please enter your comment!
Please enter your name here