ವಿಜಯಸಾಕ್ಷಿ ಸುದ್ದಿ,ಗದಗ
Advertisement
ಎಟಿಎಂ ಕೊರೆದು ಹಣ ದೋಚಲು ಯತ್ನಿಸಿದ್ದ ಇಬ್ಬರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಜ.16ರ ತಡರಾತ್ರಿ ನಗರದ ಹಾತಲಗೇರಿ ರಸ್ತೆಯಲ್ಲಿರುವ ಎಸ್ಬಿಐ ಬ್ಯಾಂಕ್ ಎಟಿಎಂಗೆ ದುಷ್ಕರ್ಮಿಗಳು ಕನ್ನ ಹಾಕಿದ್ದರು. ಗ್ಯಾಸ್ ವೆಲ್ಡಿಂಗ್ ಹಾಗೂ ಕಟರ್ ನಿಂದ ಎಟಿಎಂ ಮಷಿನ್ ತುಂಡರಿಸಲು ಮುಂದಾಗಿದ್ದ ಘಟನೆ ನಡೆದಿತ್ತು.
ಕೃತ್ಯವೆಸಗುವ ಮುನ್ನ ಇಬ್ಬರು ಖದೀಮರು ಎಟಿಎಂನೊಳಗೆ ನುಗ್ಗಿ, ಸಿಸಿ ಟಿವಿಗೆ ಕೆಂಪು ಪಟ್ಟಿ ಅಂಟಿಸಿದ್ದರು. ಅಲ್ಲದೇ, ಎಟಿಎಂನಲ್ಲಿ ಎಲ್ಲೂ ಬೆರಳಿನ ಗುರುತು ಮೂಡಬಾರದೆಂದು ಕೈಗೆ ಹ್ಯಾಂಡ್ ಗ್ಲೌಸ್ ಹಾಕಿ ಹಣ ದೋಚಲು ಯತ್ನಿಸಿದ್ದರು. ಆದರೆ, ಅವರ ಪ್ರಯತ್ನ ಯಶಸ್ವಿಯಾಗದೇ ಬರಿಗೈಲಿ ಹಿಂದುರಿಗಿರುವ ದೃಶ್ಯ ಸದ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.