ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
2019ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿದ್ದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಸೇರಿದಂತೆ 121 ಪೊಲೀಸ್ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಭಾರಿ ಪೊಲೀಸ್ ಕಮೀಷನರಾಗಿ ಕರ್ತವ್ಯ ನಿರ್ವಹಿಸಿದ್ದ ರಾಘವೇಂದ್ರ ಸುಹಾಸ, ಬೆಳಗಾವಿ ಜಿಲ್ಲೆಯ ವರಿಷ್ಠಾಧಿಕಾರಿ ಐಪಿಎಸ್ ಲಕ್ಷ್ಮಣ ನಿಂಬರಗಿ, ಬಾಗಲಕೋಟೆ ಜಿಲ್ಲೆಯ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಮಿಥುನಕುಮಾರ ಜಿ.ಕೆ, ಶಿವಮೊಗ್ಗ ಜಿಲ್ಲೆಯ ಕೆ.ಎಂ.ಶಾಂತಕುಮಾರ ಸೇರಿದಂತೆ ಒಟ್ಟು 121 ಜನರಿಗೆ ಸಿಎಂ ಮೆಡಲ್ ದೊರಕಿದೆ.
ಕೊಪ್ಪಳದ ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಗುಪ್ತಚರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹ್ಮದ್ ಹಕ್ 2019ನೇ ಸಾಲಿನ ಸಿಎಂ ಮೆಡಲ್ ಗೆ ಭಾಜನರಾಗಿದ್ದಾರೆ.
ಕೊಪ್ಪಳ ಜಿಲ್ಲಾ ಪೋಲಿಸ್ ಇಲಾಖೆಯಲ್ಲಿ ಸೈಬರ್ ಕ್ರೈಮ್ ವಿಭಾಗದಲ್ಲಿ ಅತ್ಯುತ್ತಮವಾದ ಪರಿಣಿತ ಹೊಂದಿರುವ ಪೋಲಿಸ್ ಎಂದೇ ಹೆಸರುವಾಸಿ. ಸೋಷಿಯಲ್ ಮೀಡಿಯಾಗಳ ಬಗ್ಗೆ ವಿಶೇಷ ಪರಿಣಿತ ಹೊಂದಿರುವ ಮತ್ತು ಸೈಬರ್ ತಂತ್ರಜ್ಞಾನದ ಬಗ್ಗೆ, ಕಾನೂನಿನ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ಹಕ್ ಬಗ್ಗೆ ಇಡೀ ಜಿಲ್ಲೆಯ ಪೋಲಿಸರು ಹೆಮ್ಮೆ ಪಡುತ್ತಾರೆ. ಹಲವಾರು ಕ್ಲಿಷ್ಟಕರ ಪ್ರಕರಣಗಳಲ್ಲಿ ಇವರು ತಮ್ಮ ಪರಿಣಿತಿಯಿಂದ ಆರೋಪಿಗಳನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಎಂ ಮೆಡಲ್ ಗೆ ಭಾಜನರಾಗಿರುವ ಹಕ್ ರಿಗೆ ಕೊಪ್ಪಳ ಜಿಲ್ಲೆಯ ಸಮಸ್ತ ಪೋಲಿಸ್ ಅಧಿಕಾರಿಗಳು, ಸಿಬ್ಬಂದಿಗಳು, ಹಿತೈಷಿಗಳು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.