ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದು ಕೂಲಿಕಾರರ ಕೊರತೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆಯ ಮೂಲಕ ಶೇ.50 ರಷ್ಟು ಖರ್ಚು ಉಳಿತಾಯ ಮಾಡಲಾಗುತ್ತಿದೆ.
ಒಂದು ಎಕರೆ ಭತ್ತದ
ಗದ್ದೆಗೆ ಕ್ರಿಮಿನಾಶಕ ಸಿಂಪರಣೆಗೆ ನಾಲ್ಕು ಕೂಲಿ ಕಾರ್ಮಿಕರು ಬೇಕಾಗುತ್ತದೆ. ಸಹಜವಾಗಿ ಒಂದು ಲೀಟರ್ ಕ್ರಿಮಿನಾಶಕ ಒಂದು ಎಕರೆಗೆ ಸಿಂಪರಣೆ ಮಾಡಲಾಗುತ್ತದೆ. ಆದರೆ ಡ್ರೋಣ್ ಮೂಲಕ ಒಂದು ಲೀಟರ್ ನಲ್ಲಿ ಎರಡು ಎಕರೆ ಸಿಂಪರಣೆ ಸಾಧ್ಯವಿದೆ. ಇದರಿಂದ ಹಣ, ಸಮಯ, ಮಾನವ ಸಂಪನ್ಮೂಲ ಉಳಿಸಲು ಸಾಧ್ಯವಿದೆ.
ಈಗಾಗಲೇ ತಮಿಳುನಾಡು ಆಂಧ್ರ ಪ್ರದೇಶ ರಾಜ್ಯದ ರೈತರು ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದಾರೆ. ಡ್ರೋಣ್ ನಲ್ಲಿ 11 ಲೀಟರ್ ಕ್ರಿಮಿನಾಶಕ ಹಾಕಿ ಮೊದಲು ಜಿಪಿಎಸ್ ಮಾಡಿ ರಿಮೋಟ್ ಮೂಲಕ ಚಾಲನೆ ಮಾಡುತ್ತ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತದೆ. ಒಂದು ಎಕರೆಗೆ 600 ರೂ.ಬಾಡಿಗೆ ಇದ್ದು 7 ನಿಮಿಷಗಳಲ್ಲಿ ಒಂದು ಎಕರೆ ಸಿಂಪರಣೆ ಮಾಡಬಹುದಾಗಿದೆ. ಇದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ.
ರೈತರಿಗೆ ಉಪಯುಕ್ತ: ಡ್ರೋಣ್ ಮೂಲಕ ಭತ್ತ ಸೇರಿ ವಿವಿಧ ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆ ವೆಚ್ಚದಾಯಕವಾಗಿದ್ದು ಬೇರೆ ರಾಜ್ಯಗಳಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ. ಈ ಬಾರಿ ಬಾಡಿಗೆ ಆಧಾರದಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ ಇದರಿಂದ ಕೂಲಿ ಆಳಿನ ಕೊರತೆಯಿಂದ ಬೇಸತ್ತ ರೈತರಿಗೆ ಹಣ ಸಮಯ ಉಳಿತಾಯವಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ
ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ರೈತರ ವಿನೂತನ ಆವಿಷ್ಕಾರ
Advertisement