ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಸ್ನೇಹಿತರ ಜೊತೆ ಮಂಗಳವಾರ ರಾತ್ರಿ ಪಾರ್ಟಿಗೆಂದು ಹೋದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಬರಗೂರು ಗ್ರಾಮದಲ್ಲಿ ನಡೆದಿದೆ.
ದಲಿತ ಯುವಕ ದಾನೇಶ್ (22) ಶವವಾಗಿ ಪತ್ತೆಯಾಗಿದ್ದು, ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ಕೆಲವರೊಂದಿಗೆ ಕೆಲದಿನಗಳ ಹಿಂದೆ ಪ್ರೀತಿ ವಿಷಯಕ್ಕಾಗಿ ದಾನೇಶ್ ಜಗಳ ಮಾಡಿಕೊಂಡಿದ್ದು, ಸೇಡಿಗಾಗಿ ಕೊಲೆ ಮಾಡಿರಬಹುದು ಎನ್ನಲಾಗಿದೆ. ಕಾರಟಗಿ ಪಿಎಸ್ಐ ಮಲ್ಲಪ್ಪ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement