ಪೊಲೀಸರ ಮಿಂಚಿನ ಕಾರ್ಯಾಚರಣೆ: ಪಂದ್ಯದ ಹುಂಜಗಳ ಸಮೇತ ಒಂಬತ್ತು ಜನರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

Advertisement

ಸಂಕ್ರಾತಿ ಹಬ್ಬದ ಜಿಲ್ಲೆಯ ಗಂಗಾವತಿ ತಾಲೂಕಿನ‌ ಹೆಬ್ಬಾಳ ಕ್ಯಾಂಪ್ ಗ್ರಾಮದಲ್ಲಿ ನಡೆಯುತ್ತಿದ್ದ ಕೋಳಿ ಪಂದ್ಯಾವಳಿಗೆ ಗಂಗಾವತಿ ಪೊಲೀಸ್ರು ಮಿಂಚಿನ ದಾಳಿ ಮಾಡಿದ್ದಾರೆ.

ತಾಲ್ಲೂಕಿನ ಹೆಬ್ಬಾಳ ಕ್ಯಾಂಪ್, ಆಚಾರನರಸಾಪುರ, ಮರಳಿ, ಗಂಗಾವತಿ, ಕಾರಟಗಿ, ಶ್ರೀರಾಮ ನಗರದ ಜನರು ಭಾಗವಹಿಸಿದ್ದರು ಎನ್ನಲಾಗಿದೆ.

ನಿಷೇಧಿತ ಕೋಳಿ ಪಂದ್ಯಾವಳಿ ಭಾರಿ ಪ್ರಮಾಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ಹೆಬ್ಬಾಳ ಕ್ಯಾಂಪ್ ಸೀಮೆಯ ಬಳಿ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ಮತ್ತು ತಂಡ ದಾಳಿ ಮಾಡಿ ಜಮೀನಿನ ಮಾಲೀಕನ್ನು ಸೇರಿ ಒಂಬತ್ತು ಜನರನ್ನು ಬಂಧಿಸಿ, ಏಳು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಹುಂಜದ ಜೂಜಾಟದ ಹಣವನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ, ಜೂಜೂಕೋರರು ಕೋಳಿ ಪಂದ್ಯವನ್ನು ರಾಜಾರೋಷವಾಗಿ ನಡೆಸಿದ್ದು ಹುಂಜಗಳಿಗೆ ಸಾಕಷ್ಟು ತಯಾರಿ ಮಾಡಿ ಬಲಿಷ್ಠಗೊಳಿಸಿ, ಹುಂಜಗಳ ಕಾಲಿಗೆ ಸಣ್ಣ ರೇಜರ್ ಬ್ಲೇಡ್ ಕಟ್ಟಿ ಪಂದ್ಯ ನಡೆಸಲಾಗುತ್ತಿತ್ತು. ಇದಕ್ಕೆ ಸಾವಿರಾರು ರೂಪಾಯಿ ಜೂಜು ಕಟ್ಟಿ ಪಂದ್ಯ ನಡೆಸಲಾಗುತ್ತಿತ್ತು. ಪಂದ್ಯದ ಹುಂಜಕ್ಕೆ ಭಾರಿ ಬೇಡಿಕೆ ಇದ್ದು, ಬಲಿಷ್ಠ ಹಾಗು ಅನುಭವಿ ಹುಂಜಕ್ಕೆ ಲಕ್ಷ ಲಕ್ಷ ಬೆಲೆ ಕಟ್ಟಲಾಗುತ್ತದೆ


Spread the love

LEAVE A REPLY

Please enter your comment!
Please enter your name here