

-ರಾಜ್ಯ ಸರಕಾರದಿಂದ ಅಧಿಕಾರಿಗಳ ಮತ್ತೊಂದು ಸರ್ಜರಿ
ವಿಜಯಸಾಕ್ಷಿ ಸುದ್ದಿ, ಗದಗ/ಕೊಪ್ಪಳ: ಈಚೆಗಷ್ಟೇ ರಾಜ್ಯ ಸರಕಾರ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿತ್ತು. ಇದೀಗ ರವಿ ಚನ್ನಣ್ಣವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದೆ.
ರವಿ ಚನ್ನಣ್ಣವರ್ ಅವರನ್ನು ಅಪರಾಧ ತನಿಖಾ ವಿಭಾಗದಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಿದೆ. ಅಪರಾಧ ತನಿಖಾ ವಿಭಾಗದ ಎಸ್ಪಿಯಾಗಿದ್ದ ಡಾ.ಭೀಮಾಶಂಕರ ಗುಳೇದ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿಯಾಗಿದ್ದ ಅಬ್ದುಲ್ ಅಹ್ಮದ್ ಅವರನ್ನು ಕೆಎಸ್ಆರ್ಟಿಸಿಯ ಭದ್ರತಾ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದೆ. ಕೊಪ್ಪಳ ಎಸ್ಪಿಯಾಗಿದ್ದ ಟಿ.ಶ್ರೀಧರ್ ಅವರನ್ನು ನಾಗರಿಕ ಸೇವಾ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿ ವರ್ಗಾಯಿಸಿದೆ. ಒಟ್ಟಾರೆ 9 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.