ಲಂಚ ಕೇಳಿದ ಕಮಿಷನರ್, ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಬಂಧನ ಯಾವಾಗ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಘನತ್ಯಾಜ್ಯ ವಿಲೇವಾರಿ ಮಾಡಿದ ಕಾಮಗಾರಿಯ ಬಿಲ್ ಕೊಡಲು ಕಮಿಷನ್ ಹಣಕ್ಕೆ‌ ಬೇಡಿಕೆ ಇಟ್ಟಿದ್ದ ನಗರಸಭೆ ಎಇಇ ಎಸಿಬಿ ಬಲೆಗೆ ಬಿದ್ದ ಬೆನ್ನಲ್ಲೇ ಈ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಎಇಇ ವರ್ಧಮಾನ್ ಹುದ್ದಾರ್ ಅವರಷ್ಟೇ ಲಂಚ ಕೇಳಿದ್ದಲ್ಲ. ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಅವರೂ 1.50 ಲಕ್ಷ ಕಮಿಷನ್ ಕೊಡಲು ಕೇಳಿದ್ದರು ಎನ್ನಲಾಗಿದೆ. ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಅನಿಲಕುಮಾರ್ ಮುದ್ದಾ ಕೂಡ ಜುಲೈ 5ರಂದು ಕಮಿಷನ್ ಹಣ 10 ಸಾವಿರ ರೂ. ಹಣ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ನಗರಸಭೆ ಆಯುಕ್ತ ರಮೇಶ್ ಜಾಧವ್ ಹಾಗೂ ಕೋಶದ ಎಂಜಿನಿಯರ್ ಮೇಲೂ ಪ್ರಕರಣ ದಾಖಲಾಗಿದೆ. ಆದರೆ ಬುಧವಾರ ರಾತ್ರಿ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಗುರುವಾರವೂ ವಿಚಾರಣೆ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಆದರೆ ಇವರಿಬ್ಬರನ್ನೂ ಇದುವರೆಗೂ ಬಂಧಿಸದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಊಹಾಪೋಹಗಳು ಎದ್ದಿದ್ದು, ರಾಜಕಾರಣಿಗಳ ಒತ್ತಡಕ್ಕ ಮಣಿದಿದ್ದಾರಾ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಒಟ್ಟು 25 ಸಾವಿರ ರೂ. ಹಣವನ್ನು ಕಮಿಷನ್ ರೂಪದಲ್ಲಿ ಪಡೆಯುತ್ತಿದ್ದಾಗ ಎಇಇ ವರ್ಧಮಾನ್ ಹುದ್ದಾರ್ ಅವರನ್ನು ಬುಧವಾರ ಬಂಧಿಸಲಾಗಿತ್ತು.

ತಪ್ಪಿತಸ್ಥರೆಂದು ಕಂಡುಬಂದಲ್ಲಿ ಬಂಧನ

ಈ ಕುರಿತು ಎಸಿಬಿ ಡಿವೈಎಸ್ಪಿ ವೇಣುಗೋಪಾಲ್ ಅವರನ್ನು ಪ್ರಶ್ನಿಸಿದಾಗ, ದೂರುದಾರರು ದೂರು ನೀಡಿದ್ದರಿಂದ ನಾವು ಇನ್ನುಳಿದ ಇಬ್ಬರ ಮೇಲೂ ಎಫ್ಐಆರ್ ಮಾಡಿದ್ದೇವೆ. ಧ್ವನಿಮುದ್ರಿಕೆಗಳು ಹಾಗೂ ಇತರ ಸಾಕ್ಷಿಗಳನ್ನು ಕಲೆಹಾಕಿ, ದಾಖಲೆ ಸಿದ್ಧಪಡಿಸುತ್ತಿದ್ದೇವೆ. ನಿಷ್ಪಕ್ಷಪಾತ ತನಿಖೆ ಕೈಗೊಂಡಿದ್ದೇವೆ. ಏಕಾಏಕಿ ಬಂಧಿಸಲು ಸಾಧ್ಯವಿಲ್ಲ. ತಪ್ಪಿತಸ್ಥರು ಅಂತ ಕಂಡುಬಂದಲ್ಲಿ ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ರಾಜಕೀಯ ಒತ್ತಡದ ಪ್ರಶ್ನೆ ಇಲ್ಲ. ಒತ್ತಡಕ್ಕೆ ಮಣಿಯುವುದೂ ಇಲ್ಲ ಎಂದು ಉತ್ತರಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here