ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ಹಾಗೂ ಅರಿವು ಕೇಂದ್ರವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳ, ಯುವಕರ ಶ್ರೇಯೋಭಿವೃದ್ಧಿಯಲ್ಲಿ ಅಂಗನವಾಡಿ-ಅರಿವು ಕೇಂದ್ರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಜನರು ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಿಡಿಪಿಓ ಮೃತ್ಯುಂಜಯ ಗಡ್ಡದನವರಿ, ಹನಮರಡ್ಡಿ ಫಕ್ಕೀರಡ್ಡಿ, ಎಸ್ ಹೊಂಬಳ, ಈರನಗೌಡ ಪಾಟೀಲ, ನಿರ್ಮಲಾ ಬೆಟದೂರ, ಗಂಗಾಧರ ಸಂಧಿಮನಿ, ಕವಿತಾ ಸಂಕನಗೌಡರ, ಮೌಲಾಸಾಬ ಪಿಂಜಾರ, ಬಸವರಡ್ಡಿ ಮರಡೂರ, ಹುಲಿಗೆಪ್ಪ ಕರೆಣ್ಣವರ, ಬಿಬಿಜಾನ ನದಾಫ್, ಚನ್ನವೀರಗೌಡ ಬೆಟ್ಟದೂರು, ಶಿವಯೋಗಿ ಹೊಸಕೇರಿ, ರೋಹನ್ ಕುಂದೇನಹಳ್ಳಿ, ಚಂದ್ರು ಎಸ್, ಪ್ರಭುಗೌಡ ಪಾಟೀಲ, ಶೇಖರಗೌಡ ಪಾಟೀಲ, ದ್ಯಾಮಣ್ಣ ಪೂಜಾರ ಮುಂತಾದವರು ಉಪಸ್ಥಿತರಿದ್ದರು.