ವಿಜಯಸಾಕ್ಷಿ ಸುದ್ದಿ, ಗದಗ
ಲಾಕ್ ಡೌನ್ ಸಂದರ್ಭದಲ್ಲಿ ಹಣ ಗಳಿಸುವ ದುರಾಸೆಯಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ೧೫ ಜನರನ್ನು ಬಂಧಿಸಲಾಗಿದೆ. ಮೂರು ದಿನಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 66,400 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು 15 ಜನರನ್ನು ಬಂಧಿಸಲಾಗಿದೆ.
ಮೇ 29, 30 ಹಾಗೂ 31ರಂದು ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ, ಶಿರಹಟ್ಟಿ, ಬೆಟಗೇರಿ, ಮುಂಡರಗಿ ಪೊಲೀಸರು ಹಾಗೂ ಸೈಬರ್ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತರನ್ನು ಲಕ್ಷ್ಮೇಶ್ವರದ ಗಂಗಾಧರ ಶಿವಪ್ಪ ಹಳ್ಳಿಕೇರಿ, ಶರಣಪ್ಪ ಬಸವಣ್ಣೆಪ್ಪ ಗೋಡಿ, ಗಜೇಂದ್ರಗಡದ ಸಂಗಪ್ಪ ಈಶಪ್ಪ ಹಾವೇರಿ, ಹುಲಕೋಟಿಯ ನಾಗರಾಜ್ ಯಲ್ಲಪ್ಪ ಕಬಾಡಿ, ಶಶಿಕುಮಾರ್ ರಾಮಚಂದ್ರ ನಾಯಕ್, ಗಾವರವಾಡದ ಪ್ರಕಾಶ್ ಯಲ್ಲಪ್ಪ ಬೆಟಗೇರಿ, ಕದಡಿಯ ಅಡಿವೆಪ್ಪ ಮರಿಯಪ್ಪ ಸಾಗರ, ನಾಗಾವಿ ತಾಂಡಾದ ಮಾರುತಿ ಶಂಕ್ರಪ್ಪ ಲಮಾಣಿ, ಬಳಗಾನೂರಿನ ಬೂದಪ್ಪ ಬಸಪ್ಪ ಚಲವಾದಿ, ಕಳಸಾಪುರ ರಸ್ತೆಯ ಶಂಕರಸಾ ನಾಗೇಂದ್ರಸಾ ಪವಾರ,
ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ಬಸವರಾಜ್ ರಾಮಪ್ಪ ಪತ್ತಾರ, ಬೆಟಗೇರಿಯ ಬಸಮ್ಮ ಕೊಟ್ರಪ್ಪ ಭಜಂತ್ರಿ, ಪ್ರದೀಪ ಅರ್ಜುನ್ ಮುದೋಳ ಹಾಗೂ ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ರಾಮಪ್ಪ ಬಾಲಪ್ಪ ಹರಣಶಿಖಾರಿ, ಕಲಕೇರಿಯ ಮಂಜುನಾಥ್ ಬಸಪ್ಪ ನಾಯ್ಕರ್ ಎಂದು ಗುರುತಿಸಲಾಗಿದೆ.
ಈ ಕಾರ್ಯಾಚರಣೆಗಳಲ್ಲಿ ಲಕ್ಷ್ಮೇಶ್ವರ ಪಿಎಸ್‌ಐ ಲೋಹಾರ, ಗಜೇಂದ್ರಗಡ ಪಿಎಸ್‌ಐ ದಾಸ್ಯಾಳ, ಗದಗ ಗ್ರಾಮೀಣ ಠಾಣೆಯ ಪಿಎಸ್‌ಐ ಅಜಿತಕುಮಾರ್ ಹೊಸಮನಿ, ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ಟಿ. ಮಹಾಂತೇಶ್, ಶಿರಹಟ್ಟಿ ಪಿಎಸ್‌ಐ ನವೀನ್ ಜಕ್ಕಲಿ, ಬೆಟಗೇರಿ ಪಿಎಸ್‌ಐ ರಾಜೇಶ್ ಬಟಗುರ್ಕಿ, ಮುಂಡರಗಿ ಪಿಎಸ್‌ಐ ನೂರಜಾಹನ್ ಸದರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಯತೀಶ್ ಎನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಬಕಾರಿ ಇಲಾಖೆ ಮೌನವೇಕೆ?
ಇಷ್ಟೆಲ್ಲ ಅಕ್ರಮ ಮದ್ಯ ಮಾರಾಟ ವಾಗುತ್ತಿದ್ದರೂ ನಮಗೆ ಇದ್ಯಾವದು ಸಂಬಂಧವೇ ಇಲ್ಲ ಅನ್ನುವಂತೆ ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ ಅಂತ ಜನ ಆರೋಪಿಸುತ್ತಿದ್ದಾರೆ.