ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬೆಳಗಾವಿ ನಮಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ವಿರುದ್ಧ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗದಗನ ಪಶು ವೈದ್ಯಕೀಯ ವಿಶ್ವವಿದ್ಯಾಲಯ ದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾತನಾಡಿದ ಸಚಿವ ಪ್ರಭು ಚವ್ಹಾಣ, ಅಜಿತ್ ಪವಾರ್ ಗೆ ತಲೆನೇ ಇಲ್ಲಾ, ಆತ ಡಬಲ್ ಗೇಮ್ ವ್ಯಕ್ತಿ ಅಂತ ಕಿಡಿ ಕಾರಿದರು. ಗಡಿ ವಿಷಯದಲ್ಲಿ ರಾಜ್ಯದ ಒಂದಿಂಚು ಜಾಗೆಯನ್ನು ಬಿಟ್ಟು ಕೊಡಲ್ಲಾ ಎಂದರು.
ಕರ್ನಾಟಕದ ಜಾಗೆ ನಮ್ಮದು ಅನ್ನುವುದು ದಡ್ಡತನ ಪರಮಾವಧಿ. ಅಜಿತ್ ಪವಾರ್ ಡಬಲ್ ಸ್ಟ್ಯಾಂಡರ್ಡ್ ವ್ಯಕ್ತಿ, ಅವರಿಗೆ ತಲೆ ಇಲ್ಲಾ ರಾತ್ರೋರಾತ್ರಿ ನಾಯಕನಾದವನು. ಅಂತವನ ಮಾತಿಗೆ ಕಿಮ್ಮತ್ತು ಕೊಡುವುದು ಅಗತ್ಯವಿಲ್ಲಾ ಅಂತಾ ವಾಗ್ದಾಳಿ ನಡೆಸಿದರು.
ಗಡಿ ಬಗ್ಗೆ ಸಾಂಗ್ಲಿ, ಸೊಲ್ಲಾಪುರಗೆ ಬಂದು ಮಾತನಾಡುತ್ತೇನೆ ಎಂದು ಉದ್ದಟತನ ತೋರಿದ ಅಜಿತ ಪವಾರ್ ಗೆ ಧೈರ್ಯವಿದ್ದರೆ ಕರ್ನಾಟಕ ಕ್ಕೆ ಬಂದು ಮಾತನಾಡಲಿ ಎಂದು ಸವಾಲು ಹಾಕಿದರು.
ಅಜಿತ ಪವಾರನದು ಬರಿ ಬೆಂಕಿ ಹಚ್ಚುವ ಕೆಲಸ. ಅದೇ ಅವರ ಉದ್ಯೋಗ, ಮಹಾರಾಷ್ಟ್ರದಲ್ಲೂ ಬರಿ ಬೆಂಕಿ ಹಚ್ಚುವ ಕೆಲಸ ಮಾಡ್ತಾನೆ ಬಂದಿದ್ದಾರೆ. ಮಹಾರಾಷ್ಟ್ರ ಜನರೇ ಕಿಮ್ಮತ್ತು ಕೊಡಲ್ಲಾ, ಇನ್ನು ಕರ್ನಾಟಕ ಜನ ಕಿಮ್ಮತ್ತು ಕೊಡೊದೆ ಇರೋದು ಯಾವ ಲೆಕ್ಕ ಅಂತ ಸಚಿವ ಪ್ರಭು ವ್ಯಂಗ್ಯ ವಾಡಿದರು.
Trending Now



