ವಿಜಯಸಾಕ್ಷಿ ಸುದ್ದಿ ಕೊಪ್ಪಳ
ದೇವಸ್ಥಾನದ ಅಡುಗೆ ಭಟ್ಟನನ್ನು ರಾತ್ರಿ ಹೊತ್ತೊಯ್ದ ಚಿರತೆ ಪೀಸ್ ಪೀಸ್ ಮಾಡಿ ತಿಂದು ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಗುರುವಾರ ನಸುಕಿನ ವೇಳೆ ಜರುಗಿದೆ.
ಆನೆಗೊಂದಿ ಬಳಿಯ ಮೇಗೋಟೆ ದುರ್ಗಾ ಬೆಟ್ಟದ ದೇಗುಲವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಹುಲಗೇಶ್ ಈರಪ್ಪ ಮಡ್ಡೇರ್ ನಿದ್ದೆಯಲ್ಲಿದ್ದಾಗ ಬೇಟೆಗೆ ಹೊಂಚು ಹಾಕಿದ ಚಿರತೆ ಸದ್ದು ಮಾಡದೇ ಹುಲಗೇಶ್‌ನನ್ನು ಸುಮಾರು ಒಂದು ಕಿ.ಮೀ ದೂರದ ಕಾಡುಪೋದೆಯೊಳಗೆ ಹೊತ್ತೊಯ್ದು ಚಿಂದಿ ಚಿಂದಿ ಮಾಡಿ ತಿಂದು ಬಿಸಾಕಿ ಪರಾರಿಯಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಈ ಭಾಗದಲ್ಲಿ ಚಿರತೆ, ಕರಡಿ ಹಾವಳಿ ವಿಪರೀತವಾಗಿದ್ದು ಅರಣ್ಯ ಇಲಾಖೆ ತುರ್ತುಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಚಿರತೆ ಹಿಡಿಯಲು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಅಡುಗೆ ಭಟ್ಟನ ಹೊತ್ತೊಯ್ದು ಕೊಂದು ತಿಂದ ಚಿರತೆ!
Advertisement