ಅದು ಘೇರಾವ್ ಅಲ್ಲ, ಮನವಿ ಸಲ್ಲಿಕೆ: ವಿಜಯಸಾಕ್ಷಿ ವರದಿಗೆ ಸ್ಪಷ್ಟನೆ ಕೊಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ರೀ ಸ್ವಾಮಿ ಘೇರಾವ್ ಅಂದ್ರೇನು? ಮನವಿ ಕೊಡೊಕೆ ಬಂದಿರೋರು ನನ್ನ ಸುತ್ತುವರಿದು ಮನವಿ ಕೊಟ್ಟರಷ್ಟೇ.. ಅದನ್ನೇ ಘೇರಾವ್ ಅಂತ ಬರೆದರೆ ಹೇಗೆ? ಎಂದು ಬಿ.ಸಿ.ಪಾಟೀಲ ಹೇಳಿದರು.
ರವಿವಾರ ವಿಜಯಸಾಕ್ಷಿಯ ಕೊಪ್ಪಳ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪತ್ರಿಕೆಯ ವೆಬ್‌ನಲ್ಲಿ ಸುದ್ದಿ ಪ್ರಕಟಗೊಂಡ ಒಂದೇ ಗಂಟೆಯಲ್ಲಿ ಸ್ಪಷ್ಟೀಕರಣ ನೀಡಿದರು.
ಕೊಪ್ಪಳದಲ್ಲಿ ಪತ್ರಕರ್ತರ ಜೊತೆ‌ ಮಾತನಾಡಲು ಅದಕ್ಕೆ‌ ಹಿಂಜರಿಯಬೇಕೆನಿಸುತ್ತೆ. ರಾಜ್ಯದ ಬೇರೆ ಬೇರೆ ಕಡೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವುದು ಸುಲಭ. ಆದರೆ ಕೊಪ್ಪಳದಲ್ಲಿ ಅನವಶ್ಯಕ ಪ್ರಶ್ನೆಗಳನ್ನೇ ಜಾಸ್ತಿ ಕೇಳ್ತಾರೆ ಎಂದು ನಗುತ್ತಲೇ ಪ್ರತಿಕ್ರಿಯೆ ನೀಡಿದರು.
ನನ್ನನ್ನು ಟೀಕಿಸಿ ಬರೆಯೋದರಲ್ಲೇ ನಿಮಗೆ ಖುಷಿ ಅನಿಸಿದರೆ ಬರೆದುಕೊಳ್ಳಿ. ಏನ್ ಮಾಡಾಕಾಗುತ್ತೆ ಎಂದ ಪಾಟೀಲರಿಗೆ, ಸುದ್ದಿಯನ್ನು ಸುದ್ದಿಯಾಗೇ ಕೊಡೋದು ವಿಜಯಸಾಕ್ಷಿಯ ಕೆಲಸ. ಇಲ್ಲಸಲ್ಲದ್ದನ್ನ ಸೃಷ್ಟಿ ಮಾಡಿ, ಕಲ್ಪನೆ ಮಾಡಿಕೊಂಡು ವರದಿ ಮಾಡಲ್ಲ ಎಂಬುದನ್ನು ವಿಜಯಸಾಕ್ಷಿ ಮನವರಿಕೆ ಮಾಡಿತು.

Advertisement

Spread the love

LEAVE A REPLY

Please enter your comment!
Please enter your name here