ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊಪ್ಪಳ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಮಾಡಿಸುತ್ತಿರುವುದು ಸರಿಯಲ್ಲ. ರೈತರು ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮಾಡಬೇಕೆಂದು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ನಿರ್ಧಾರದ ಪ್ರಕಾರ ರೈತರು ಬೆಳೆ ಸಮೀಕ್ಷೆ ಮಾಡುವುದು ಸರಿ ಇರಬಹುದು. ಆದರೆ ಜಿಪಿಎಸ್ ಮಾಡುವಾಗ ಸರ್ವೆ ನಂಬರಿನ ಉತಾರ ಅಲ್ಲಾ ಎಂದು ಜಿಪಿಎಸ್ ಹೇಳುತ್ತದೆ.
ನೂರಾರು ಮೀಟರ್ ದೂರದಲ್ಲಿ ಜಿಪಿಎಸ್ ತೊರಿಸಿದರೆ ರೈತರು ತಮ್ಮ ಜಮೀನು ಬಿಟ್ಟು ಮತ್ತೆ ಎಲ್ಲಿಗೆ ಹೋಗಿ ಜಿಪಿಎಸ್ ಮಾಡಬೇಕು? ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್. ನಾರಾಯಣರೆಡ್ಡಿಯವರ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಕೆಲವು ತಾಲೂಕಿನ ಹಳ್ಳಿಗಳ ರೈತರು ಈ ಬೆಳೆ ಸಮೀಕ್ಷೆ ಮಾಡುವಲ್ಲಿ ಸರ್ಕಾರದ ಸೌಲಭ್ಯ ದೊರಕದೆ ರೈತರು ನೊಂದು ಹೋಗಿದ್ದಾರೆ. ಆದ್ದರಿಂದ ಅಧಿಕಾರಿಗಳೇ ಸಮೀಕ್ಷಾ ಕಾರ್ಯ ನಡೆಸಲಿ ಎಂದು ಆಗ್ರಹಿಸಿದ್ದಾರೆ.