ವಿಜಯಸಾಕ್ಷಿ ಸುದ್ದಿ, ವಿಜಯಪುರ
ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆಯ ಕೂಗು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅವರು ಸಿಎಂ ಬದಲಾವಣೆಯ ಮಾತೇ ಇಲ್ಲ ಎಂದು ಹೇಳಿಕೆ ನೀಡಿದ್ದರೂ ಆ ವಿಷಯ ಇನ್ನೂ ಜೀವಂತಿಕೆ ಪಡೆದುಕೊಂಡಿದೆ. ಇಲ್ಲಿಯವರೆಗೂ ಸಿಎಂ ವಿರೋಧ ಮಾತುಗಳನ್ನು ಹೇಳುತ್ತಿದ್ದ ಯತ್ನಾಳ್ ಈಗ ಪೋಸ್ಟ್ ವೊಂದನ್ನು ಹಾಕಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ನಾನು ಅರುಣ್ ಸಿಂಗ್ ಅವರನ್ನು ಭೇಟಿ ಮಾಡುವುದಕ್ಕಾಗಿ ಸಮಯ ಕೇಳಿಲ್ಲ. ಆದರೆ, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ ಎಂದಿರುವ ಅವರು, ಅರುಣ್ ಸಿಂಗ್ ಭೇಟಿ ಮಾಡುವವರ ಲಿಸ್ಟ್ ನ್ನು ಹಂಚಿಕೊಂಡಿದ್ದಾರೆ.
ಈ ಮೂಲಕ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿರುವ ಶಾಸಕರು ಯಾರ ಎಂಬುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಯತ್ನಾಳ್ ಹಂಚಿಕೊಂಡಿದ್ದ ಫೋಟೋದಲ್ಲಿ ಸಚಿವ ಶ್ರೀರಾಮುಲು, ಆರ್. ಅಶೋಕ್, ರಾಜಕುಮಾರ್ ಪಾಟೀಲ್ ಸೇಡಂ, ಕೆ.ಜಿ. ಬೋಪಯ್ಯ, ನೆಹರು ಓಲೇಕಾರ್, ಅಪ್ಪಚ್ಚು ರಂಜನ್, ಅಭಯ್ ಪಾಟೀಲ್, ಅರವಿಂದ್ ಬೆಲ್ಲದ್, ಪ್ರೀತಂ ಗೌಡ, ಬೆಳ್ಳಿ ಪ್ರಕಾಶ್, ಉದಯ್ ಗರುಡಾಚಾರ್, ಹರತಾಳು ಹಾಲಪ್ಪ, ಸೋಮಶೇಖರ್ ರೆಡ್ಡಿ, ಶಂಕರ್ ಗೌಡ ಪಾಟೀಲ್, ಸಿದ್ದು ಸವದಿ, ಜ್ಯೋತಿ ಗಣೇಶ್, ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಪ್ರದೀಪ್ ಶೆಟ್ಟರ್, ಮಹೇಶ್ ಕುಮಟಳ್ಳಿ, ಮಸಾಲಾ ಜಯರಾಂ, ರಾಜೇಶ್ ಗೌಡ, ಬಸವರಾಜ್ ದಡೆಸಗೂರ್, ನಂದೀಶ್ ರೆಡ್ಡಿ, ರಘುಪತಿ ಭಟ್, ಅಭಯ್ ಪಾಟೀಲ್, ಎಚ್.ವಿಶ್ವನಾಥ್, ವೈ.ಎ. ನಾರಾಯಣಸ್ವಾಮಿ, ಸುನಿಲ್ ಕುಮಾರ್ ಕಾರ್ಕಳ, ರೂಪಾಲಿ ನಾಯಕ್ ಸೇರಿದಂತೆ ಅನೇಕರ ಹೆಸರಿವೆ.
ಈ ಫೋಟೋ ಬಿಡುಗಡೆ ಮಾಡಿದ ನಂತರ ಮತ್ತೆ ಡಿಲಿಟ್ ಮಾಡಿದ್ದಾರೆ.