ಅಲ್ಲು ಸಿರೀಶ್‌ ಬರ್ತ್‌ಡೇ ಗೆ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್‌ ಲುಕ್‌ ರಿಲೀಸ್

0
Spread the love

ಫಸ್ಟ್‌ ಲುಕ್ ರಿಲೀಸ್‌ನೊಂದಿಗೆ ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅಲ್ಲು ಸಿರೀಶ್ ರ ʻಪೇಮ ಕಾದಂಟʼ

Advertisement

ಟಾಲಿವುಡ್‌ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅಲ್ಲು ಸಿರೀಶ್ ರ ʻಪ್ರೇಮ ಕಾದಂಟʼ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಅಲ್ಲು ಸಿರೀಶ್ ಅಭಿನಯದ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್ ಲುಕ್‌ ಗಳನ್ನ ಒಂದೇ ದಿನ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಟಾಲಿವುಡ್ನಲ್ಲಿ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದಾರೆ. ಅಲ್ಲು ಸಿರೀಶ್‌ ಬರ್ತ್‌ ಡೇ ದಿನವೇ ಈ ಚಿತ್ರದ ಫಸ್ಟ್‌ ಲುಕ್ ರಿಲೀಸ್‌ ಮಾಡಿರೋದು ವಿಶೇಷ. ಇದೇ ಚಿತ್ರದ ಎರಡು ಪ್ರೀ-ಲುಕ್‌ ಗಳನ್ನ ರಿಲೀಸ್‌ ಮಾಡೋ ಮೂಲಕ ಹೊಸ ಟ್ರೆಂಡ್‌ ಸೆಟ್‌ ಮಾಡಿತ್ತು.

ಇದೀಗ ಒಂದೇ ದಿನ ಎರಡು ಫಸ್ಟ್ ಲುಕ್‌ಗಳು ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ʻಪ್ರೇಮ ಕಾದಂಟ’ ಚಿತ್ರದ ಫಸ್ಟ್‌ ಲುಕ್‌ ಗಳಲ್ಲಿ ಒಂದರಲ್ಲಿ ನವಯುಗದ ಪ್ರೇಮ ಜೋಡಿಯ ಚಿತ್ರವಿದೆ. ಮತ್ತೊಂದರಲ್ಲಿ ಪ್ರೇಮಿಗಳು ರೋಮ್ಯಾಂಟಿಕ್‌ ಆಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಾಣಿಸುತ್ತದೆ. ಫಸ್ಟ್‌ ಲುಕ್ಸ್‌ ಈಗಾಗಲೇ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಆಗುತ್ತಿವೆ.

ಅಲ್ಲು ಅರವಿಂದ್ ಅರ್ಪಿಸುವ, ಜಿಎ 2 ಪಿಕ್ಚರ್ಸ್‌ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಲ್ಲು ಸಿರೀಶ್‌, ಅನು ಎಮಾನ್ಯುಯಲ್‌ ಅಭಿನಯಿಸುತ್ತಿದ್ದು ರಾಕೇಶ್‌ ಶಶಿ ನಿರ್ದೇಶನ ಮಾಡುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here