ವಿಜಯಸಾಕ್ಷಿ ಸುದ್ದಿ, ಇಸ್ರೇಲ್
ಇಸ್ರೇಲ್ ಹಾಗೂ ಪ್ಯಾಲಿಸ್ತೈನ್ ನಡುವಿನ ಭಿನ್ನಾಭಿಪ್ರಾಯ ಭೀಕರ ಸ್ವರೂಪ ಪಡೆದಿದೆ.
ಎರಡೂ ರಾಷ್ಟ್ರಗಳು ಸದ್ಯ ಪರಸ್ಪರರ ಮೇಲೆ ರಾಕೆಟ್ ದಾಳಿ ನಡೆಸುತ್ತಿವೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ 32 ಜನ ಪ್ಯಾಲಿಸ್ತೈನ್ ನಾಗರಿಕರು ಸಾವನ್ನಪ್ಪಿದ್ದಾರೆ.
ಅಲ್ಲದೇ, ಈ ಘಟನೆಯಲ್ಲಿ 220 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಘಟನೆಗೆ ವಿರೋಧ ವ್ಯಕ್ತವಾಗುತ್ತಿದೆ. ಗಾಜಾ ಬಳಿಯ ಬೀರ್ ಶೆಬಾದ ಬಳಿ ಭಾರೀ ಪ್ರಮಾಣದಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ಅಶ್ಕೆಲಾನ್, ಮೋದಿನ್ ಮತ್ತು ಟೆಲ್ ಅವೀವ್ ನಲ್ಲಿಯೂ ರಾಕೆಟ್ ದಾಳಿ ನಡೆದಿದೆ.



