

–ಹಾಲಪ್ಪ ಆಚಾರ್ ಧಾರವಾಡಕ್ಕೆ ಜಿಲ್ಲೆಗೆ!
Advertisement
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಹಾಲಪ್ಪ ಆಚಾರ್ ಈ ಸಲ ಗಣರಾಜ್ಯದ ಧ್ವಜಾರೋಹಣವನ್ನು ಧಾರವಾಡದಲ್ಲಿ ನೆರವೇರಿಸಲಿದ್ದಾರೆ.
ವಿಜಯನಗರ ಜಿಲ್ಲೆಯ ಆನಂದ್‌ಸಿಂಗ್ ಅವರನ್ನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಸಚಿವ ಸಂಪುಟದ ಬಹುತೇಕ ಸಚಿವರ ಜಿಲ್ಲಾ ಮತ್ತು ಕೋವಿಡ್ ಉಸ್ತುವಾರಿಯನ್ನು ಬದಲಾಯಿಸಿ ರಾಜ್ಯಪಾಲರ ಆದೇಶಾನುಸಾರ ಸರಕಾರದ ಉಪ ಕಾರ್ಯದರ್ಶಿ ಬಿ.ಎನ್. ಸುಮತಿ ಇಂದಿನಿಂದಲೇ ಜಾರಿಯಾಗುವಂತೆ ಅಧಿಸೂಚನೆ ಹೊರಡಿಸಿದ್ದಾರೆ.