ಈಶಾನ್ಯ ಸಾರಿಗೆಯ ಕೊಪ್ಪಳ ವಿಭಾಗದಲ್ಲಿ 10 ಜನರಿಗೆ ಪಾಸಿಟಿವ್!

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊರೊನಾ ಹೆಮ್ಮಾರಿ ಎಲ್ಲೆಡೆ ಕಬಂಧಬಾಹು ಚಾಚುತ್ತಲಿದೆ. ದುಡಿಮೆಗಾಗಿ ಹೊರಗೆ ಸಂಚರಿಸುವ ಬಹುತೇಕರನ್ನು ಕೋವಿಡ್-19 ಬಿಡುತ್ತಿಲ್ಲ. ಈಶಾನ್ಯ ಸಾರಿಗೆಯ ಕೊಪ್ಪಳ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 10 ಜನರಿಗೆ ಸದ್ಯ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈಶಾನ್ಯ ಸಾರಿಗೆಯ ಕೊಪ್ಪಳ ವಿಭಾಗದಲ್ಲಿ ಸುಮಾರು 19 ಸಾವಿರ ಜನರು ವಿವಿಧ ಹುದ್ದೆಗಳಲ್ಲಿ ಕಾರ್ಯ‌ನಿರ್ವಹಿಸುತ್ತಿದ್ದು ಈಗಾಗಲೇ 398 ಜನರು‌ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 10 ಜನರಿಗೆ ಕೋವಿಡ್-19 ದೃಢವಾಗಿದ್ದು, ಐಸೋಲೇಷನ್‌ನಲ್ಲಿದ್ದಾರೆ. ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪಾಸಿಟಿವ್ ಆಗಿರುವ ಎಲ್ಲರೂ ಬಹುತೇಕ 15 ದಿನಗಳಿಂದ ಇತರ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ. ಆದ್ದರಿಂದ ಇತರ ಸಿಬ್ಬಂದಿ ಆತಂಕಪಡುವ ಅಗತ್ಯ ಇಲ್ಲ. ಪಾಸಿಟಿವ್ ಆಗಿರುವ ಹತ್ತು ಜನರಲ್ಲಿ ಒಬ್ಬರು ಮಾತ್ರ ವಿಭಾಗೀಯ ಕಚೇರಿಯಲ್ಲಿ‌ ಕೆಲಸ ಮಾಡುತ್ತಿದ್ದು, ಅವರ ಕಾರ್ಯಸ್ಥಾನದ ಕೊಠಡಿಯನ್ನು ಸ್ಯಾನಿಟೈಜ್ ಮಾಡಲಾಗಿದೆ. ಏಪ್ರಿಲ್ 28ರಿಂದ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದು ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಈಶಾನ್ಯ ಸಾರಿಗೆಯ ಕೊಪ್ಪಳದ ವಿಭಾಗೀಯ‌ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ ವಿಜಯಸಾಕ್ಷಿಗೆ‌ ತಿಳಿಸಿದರು.

Advertisement

Spread the love

LEAVE A REPLY

Please enter your comment!
Please enter your name here