ಎಂದಿನಂತೆ ಬಸ್ ಸಂಚಾರ ಆರಂಭ; ಒಂದೆಡೆ ಮಂದಹಾಸ, ಇನ್ನೊಂದೆಡೆ ಆತಂಕ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಬಸ್ ಬಂದ್ ಮಾಡಿ ರಾಜ್ಯಾದ್ಯಂತ ಮುಷ್ಕರ ನಡೆಸಿದ್ದ ಸಾರಿಗೆ ಸಿಬ್ಬಂದಿಗಳು ಮುಷ್ಕರ ಹಿಂಪಡೆದು ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ.

ಬಸ್ ಬಂದ್ ಆಗಿದ್ದರಿಂದ ನಗರದ ಕೇಂದ್ರೀಯ ಬಸ್ ನಿಲ್ದಾಣದ ಕಳೆದ ಮೂರು ದಿನಗಳಿಂದ ಪ್ರಯಾಣಿಕರಿಲ್ಲದೇ ಬಣಗುಡುತ್ತಿತ್ತು. ಬೇರೆ ಊರಿಗೆ ಹೋಗಲಾಗದೆ ಜನರು ಚಡಪಡಿಸಿದ್ದರು. ಬಸ್ ಯಾವಾಗ ಪ್ರಾರಂಭ ಆಗುತ್ತವೆಯೋ ಎಂದು ಕನವರಿಸುತ್ತಿದ್ದರು.

ನಗರದಲ್ಲಿ ಸೋಮವಾರ ಎಂದಿನಂತೆ ಬಸ್ ಸಂಚಾರ ಶುರುವಾಗಿದೆ. ಇದರಿಂದ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಒಬ್ಬೊಬ್ಬರಾಗಿ ಆಗಮಿಸುತ್ತಿದ್ದು, ಮುಖದಲ್ಲಿ ಮಂದಹಾಸ ಮೂಡಿದೆ. ಬಸ್ ಆರಂಭ ಆಗಿರುವುದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಒಂದೊಂದಾಗಿ ಬಸ್ ಗಳು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಬಂದು ನಿಲ್ಲುತ್ತಿದ್ದು, ಪ್ರಯಾಣಿಕರು ಬಸ್ ಏರಿ ತಾವು ಹೋಗಬೇಕಾದ ಊರಿಗೆ ತೆರಳುತ್ತಿದ್ದಾರೆ. ನಿಲ್ದಾಣಕ್ಕೆ ಬಸ್ ಗಳು ಬರುತ್ತಿದ್ದಂತೆ ಜನರು ಓಡೋಡಿ ಬಂದು ಬಸ್ ಹತ್ತುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿದೆ.

ಆದರೆ, ಬಸ್ ನಿಲ್ದಾಣದಲ್ಲಿ ಸಾರಿಗೆ ವಾಹನಗಳ ಸಂಖ್ಯೆ ಕಡಿಮೆ ಇದ್ದು, ಸದ್ಯ ಜಿಲ್ಲೆಯ ವಿವಿಧ ಡಿಫೋಗಳಿಂದ 34 ಬಸ್ ರಸ್ತೆಗಿಳಿದಿವೆ. ಅದರಲ್ಲಿ ಗದಗ-13, ರೋಣ-7, ಲಕ್ಷ್ಮೇಶ್ವರ-2, ನರಗುಂದ-1 ಮುಂಡರಗಿ – 4 ಹಾಗೂ ಗಜೇಂದ್ರಗಡ- 7 ಡಿಫೋದಿಂದ ಬಸ್ ಸಂಚರಿಸುತ್ತಿವೆ. ಮತ್ತೆ ಬಸ್ ಗಳು ಬಂದಾಗುವ ಸಾದ್ಯತೆಗಳಿದ್ದು, ವಸತಿ ಇರುವ ಬಸ್ ಗಳನ್ನು ಇನ್ನೂವರೆಗೂ ಬಿಟ್ಟಿಲ್ಲ ಎಂದು ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ.

ಇದರಿಂದ ಪ್ರಯಾಣಿಕರಲ್ಲಿ ಸಹಜವಾಗಿ ಆತಂಕ ಮೂಡಿದ್ದು, ಮತ್ತೆ ಯಾವಾಗ ಬಸ್ ಬಂದ್ ಆಗುತ್ತದೆಯೋ ಎಂಬ ಅನುಮಾನದಲ್ಲೇ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here