ವಿಜಯಸಾಕ್ಷಿ ಸುದ್ದಿ, ಕೊಪ್ಪಳ
Advertisement
ಬೆಳೆ ನಡುವಿನ ಕಳೆ ತೆಗೆಯಲು ಬಳಕೆ ಮಾಡುವ ಎಡೆಕುಂಟೆಗೆ (ನೊಗ) ವಿದ್ಯಾರ್ಥಿ ಸಹೋದರರಿಬ್ಬರು ಎತ್ತುಗಳಂತೆ ಹೆಗಲು ಕೊಟ್ಟು ಹೊಲದ ಕಳೆ ಕೀಳುತ್ತಿರುವ ಕಮಾಲ್ ಕೊಪ್ಪಳ ತಾಲೂಕಿನ ಭೀಮನೂರು ಗ್ರಾಮದಲ್ಲಿ ನಡೆದಿದೆ.
ಕೇವಲ 2 ಗಂಟೆಯಲ್ಲಿ ಒಟ್ಟೂ 1.5 ಎಕರೆ ಹೊಲದಲ್ಲಿ ಎಡೆ ಹೊಡೆದ ಸಹೋದರರಾದ ಬಸವರಾಜ ಮತ್ತು ಮಂಜುನಾಥ, ಕಳೆ ಕೀಳಲು ಹೆಗಲು ಕೊಟ್ಟದ್ದು
ಮೆಕ್ಕೆಜೋಳ ಬೆಳೆ ಚಿಕ್ಕದಿದ್ದು ಎತ್ತನಿಂದ ಉಳುಮೆ ಮಾಡಿದ್ರೆ ಮಣ್ಣಲ್ಲಿ ಸಸಿ ಮುಚ್ಚುವ ಆತಂಕದ ಕಾರಣಕ್ಕಷ್ಟೇ.
ಬಸವರಾಜ ಮತ್ತು ಮಂಜುನಾಥ ಸಹೋದರರ ತಂದೆ ಫಕೀರಪ್ಪ ಬೀಡನಾಳರ ಕೃಷಿ ಕಾಯಕಕ್ಕೆ ಈ ಸಹೋದರರು ಹಾಗೂ
ಅತ್ತಿಗೆ ಲಕ್ಷ್ಮೀಯವರೂ ಸಾತ್ ನೀಡಿದ್ದಾರೆ.