ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾದಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದೆ.ಮಹಾಮಾರಿಯಿಂದಾಗಿ ಈಗಾಗಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಆದೇಶಿಸಲಾಗಿದೆ. ಆದರೆ, ಸದ್ಯ ಶಿಕ್ಷಣ ಇಲಾಖೆ ಈಗ ಮತ್ತೊಂದು ಎಡವಟ್ಟಿನ ನಿರ್ಧಾರಕ್ಕೆ ಮುಂದಾಗಿದೆ.
ಸರ್ಕಾರದ ಈ ನಿರ್ಧಾರದಿಂದಾಗಿ ದ್ವಿತೀಯ ಪಿಯುಸಿ ರಿಪೀಟರ್ಸ್ ಗೆ ಆತಂಕ ಶುರುವಾಗಿದೆ. ದ್ವಿತೀಯ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಬೇಕಿದೆ.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ರಿಪೀಟರ್ಸ್ ಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಜುಲೈ ಕೊನೆಯ ಅಥವಾ ಆಗಷ್ಟ್ ಮೊದಲ ವಾರದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಇಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಕೊರೊನಾ 3ನೇ ಅಲೆ ಆಗಷ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಬರುವ ಸಾಧ್ಯತೆ ಇದ್ದರೂ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಮುಂದಾಗಿದೆ.
ಈ ವರ್ಷ 76,387 ಪುನರಾವರ್ತಿತ ಹಾಗೂ 17,477 ಖಾಸಗಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯು ಪರೀಕ್ಷೆಗೆ ನೊಂದಣಿ ಮಾಡಲಾಗಿದೆ. ಒಂದು ವೇಳೆ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಸೋಂಕು ಹೆಚ್ಚಾದರೆ, ಪ್ರಶ್ನೆಗಳ ಸಂಖ್ಯೆಯಲ್ಲಿ ಕಡಿತ ಮಾಡುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ 50 ಅಂಕಗಳ ಪರೀಕ್ಷೆ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ. ಆ 50 ಅಂಕಗಳನ್ನೇ ಡಬಲ್ ಮಾಡಿ ಫಲಿತಾಂಶ ನೀಡಲು ಮುಂದಾಗಿದೆ. ಅಲ್ಲದೇ, ಸಾಧ್ಯವಾದರೆ, 5 ಅಂಕಗಳ ಗ್ರೇಸ್ ಮಾರ್ಕ್ಸ್ ನೀಡಲು ಪಿಯು ಬೋರ್ಡ್ ಚಿಂತನೆ ನಡೆಸಿದೆ. ಒಂದು ಗಂಟೆಯ ಬದಲಾಗಿ 30 ನಿಮಿಷಕ್ಕೆ ಪರೀಕ್ಷೆ ನಡೆಸುವ ಚಿಂತನೆ ನಡೆದಿದೆ. ಒಂದು ಕೊಠಡಿಯಲ್ಲಿ 8 ರಿಂದ 10 ವಿದ್ಯಾರ್ಥಿಗಳನ್ನು ಕೂಡಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.