ವಿಜಯಸಾಕ್ಷಿ ಸುದ್ದಿ, ಗದಗ
Advertisement
ಏಳು ಜನರ ತಂಡವೊಂದು ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಏಳು ಜನರನ್ನು ಬಂಧಿಸಿ, ಅವರಿಂದ ನಗದು ಹಣ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಎಸ್ ಎಸ್ ಪಾಟೀಲ್ ನಗರದ ಬಳಿ ಅಶೋಕ ಫಕ್ಕೀರಪ್ಪ ಹಳ್ಳಿ, ಈರಣ್ಣ ಶಂಕ್ರಪ್ಪ ಇನಾಮಾದಾರ್, ನಾಗಾರಾಜ್ ಹೆಗ್ಗಪ್ಪ ಕೌಜಗೇರಿ, ಕನಕರಾಜ್ ವೆಂಕಪ್ಪ ಕಟ್ಟಿಮನಿ, ನಿಂಗಪ್ಪ ಬಸನಗೌಡ್ ಕದ್ರಳ್ಳಿ, ವೆಂಕಟೇಶ್ ಹನಮಂತಪ್ಪ ಶಿಂದೋಗಿ ಹಾಗೂ ಈರಪ್ಪ ಕಾಳಪ್ಪ ಹಮ್ಮಗಿ ಎಂಬುವವರು ಇಸ್ಪೀಟು ಜೂಜಾಟದಲ್ಲಿ ತೊಡಗಿದ ಖಚಿತ ಮಾಹಿತಿ ಮೇರೆಗೆ ಮುಂಡರಗಿ ಠಾಣೆಯ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಅವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಬಂಧಿಸಿ, ಅವರಿಂದ ನಗದು 1520 ರೂ, ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.