ಐಪಿಎಲ್ ಬೆಟ್ಟಿಂಗ್; ಪಟ್ಟಣ ಪಂಚಾಯತಿ ಸದಸ್ಯ ಪರಾರಿ, ಮೂವರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಬೆಟ್ಟಿಂಗ್ ಭೂತ ಯಾರನ್ನು ಬಿಟ್ಟಿಲ್ಲ. ಬೆಟ್ಟಿಂಗ್ ಅನ್ನೋ ಮಾಫಿಯಾ ಎಲ್ಲರನ್ನು ತನ್ನ ಕಬಂಧಬಾಹುದಲ್ಲಿ ಇಟ್ಟುಕೊಂಡಿದೆ.

ಅದರಲ್ಲೂ ಈ ಐಪಿಎಲ್ 20-20 ಮ್ಯಾಚ್ ಎಲ್ಲರನ್ನೂ ಅಪೋಶನ್ ತಗೊಂಡಿದೆ.

ಧಿಡರನೇ ಶ್ರೀಮಂತ ರಾಗಬೇಕು ಅನ್ನೋ ಹುಚ್ಚೋ ಅಥವಾ ಅದೊಂದು ಫ್ಯಾಷನ್ ಆಗಿದೆಯೋ ಗೊತ್ತಿಲ್ಲ.

ಇಂತಹ ಹುಚ್ಚಗೆ ಬಿದ್ದ ಪಟ್ಟಣ ಪಂಚಾಯತಿ ಸದಸ್ಯನೊಬ್ಬ ಬೆಟ್ಟಿಂಗ್ ನಲ್ಲಿ ತೊಡಗಿ ಪೊಲೀಸರ ದಾಳಿಯಿಂದ ಸ್ವಲ್ಪದರಲ್ಲೆಯೇ ಪಾರಾಗಿದ್ದಾನೆ.

ಹೌದು ಭಾನುವಾರ ನಡೆದ ದೆಹಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಒಂದಕ್ಕೆ ಎರಡು ಪಟ್ಟು ನೀಡುವದಾಗಿ ಮುಳಗುಂದ ಪಟ್ಟಣದ ಶ್ರೀ ಬಾಲಲೀಲಾ ಕಲ್ಯಾಣ ಮಂಟಪದ ಮುಂದೆ ನಿಂತು ಪಟ್ಟಣ ಪಂಚಾಯತಿ ಸದಸ್ಯ ಬಸವರಾಜ್ ಶಿವನೆಪ್ಪ ಹಾರೋಗೇರಿ, ಶರಣಪ್ಪ ನೀಲಪ್ಪ ಮಳ್ಳಿ, ಪ್ರದೀಪ್ ಬಸವರಾಜ್ ಭಜಂತ್ರಿ, ನಜೀರ್ ಅಹ್ಮದ್ ಅಬ್ದುಲ್ ಕರೀಮ್ ಸಾಬ್ ಡಾಲಾಯತ್ ಎಂಬುವವರು ಬೆಟ್ಟಿಂಗ್ ನಲ್ಲಿ ತೊಡಗಿದ್ದರು.

ಖಚಿತ ಮಾಹಿತಿ ಪಡೆದ ಮುಳಗುಂದ ಠಾಣೆಯ ಪಿಎಸ್ಐ ಸಚಿನ್ ಅಲಮೇಲಕರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು. ದಾಳಿ ಕಾಲಕ್ಕೆ ಪಟ್ಟಣ ಪಂಚಾಯತಿ ಸದಸ್ಯ ಬಸವರಾಜ್ ಶಿವನೆಪ್ಪ ಹಾರೋಗೇರಿ ಪರಾರಿಯಾಗಿದ್ದು, ಉಳಿದ ಮೂವರು ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಬಂಧಿತರಿಂದ ಮೂರು ಮೊಬೈಲ್ ಹಾಗೂ 10 ಸಾವಿರಕ್ಕೂ ಹೆಚ್ಚು ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here