ಐಪಿಎಲ್ ಬೆಟ್ಟಿಂಗ್; ಬೆಟಗೇರಿಯ ತಿಪ್ಪಣಸಾ ಕಬಾಡಿ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಮಂಗಳವಾರ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 20-20 ಪಂದ್ಯದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬೆಟಗೇರಿಯ ತೆಗ್ಗಿನಪೇಟಿ ನಿವಾಸಿ
ತಿಪ್ಪಣಸಾ ಯಶವಂತಸಾ ಕಬಾಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಕೋರ್ ಹಾಗೂ ಫಲಿತಾಂಶದ ಮೇಲೆ ನೂರು ರೂಪಾಯಿಗೆ ಎರಡು ನೂರು ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಗೆ ಕರೆ ಮಾಡಿ ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆತನಿಂದ 1600 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ.

ಆರೋಪಿ ತಿಪ್ಪಣಸಾ ಯಶವಂತಸಾ ಕಬಾಡಿ ತಾನು ಕಟ್ಟಿಸಿಕೊಂಡ ಹಣವನ್ನು ಬೆಟಗೇರಿಯ ಪರ್ವತಗೌಡ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಕಿಶೋರ್ ಕುಮಾರ್ ಗಜಾನನಸಾ ಬದಿ ಎಂಬಾತನಿಗೆ ಕೊಡುವುದಾಗಿ ಹೇಳಿಕೆಯ ಹಿನ್ನೆಲೆಯಲ್ಲಿ ಆತನ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.


Spread the love

LEAVE A REPLY

Please enter your comment!
Please enter your name here