ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕಂಪ್ಲಿ
ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕನ್ನು ಸೇರ್ಪಡೆಗೊಳಿಸಬೇಕೆಂದು ಕಂಪ್ಲಿ ತಾಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆ ಹೋರಾಟ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ನೂತನ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರ್ಪಡೆ ಕುರಿತಂತೆ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಪಟ್ಟಣದ ತಹಸೀಲ್ದಾರ್ ಗೌಸಿಯಾಬೇಗಂ ಅವರಿಗೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಕರೇಕಲ್ ಶಂಕ್ರಪ್ಪ, ಈ ಹಿಂದೆಯೇ ಕಂಪ್ಲಿ ತಾಲೂಕನ್ನು ನೂತನ ವಿಜಯನಗರ ಜಿಲ್ಲೆಗೆ ಸೇರಿಸಬೇಕೆಂದು ಪಟ್ಟಣದ ಸಂಘ-ಸಂಸ್ಥೆಗಳೂ ಹೋರಾಟ ನಡೆಸಿದ್ದವು. ಆರಂಭದಲ್ಲಿ ಕಂಪ್ಲಿ ತಾಲೂಕು ತಾಲೂಕುಗಳ ಪಟ್ಟಿಯಲ್ಲಿತ್ತು. ಆದರೆ ನಂತರ ಇದನ್ನು ಕೈ ಬಿಡಲಾಗಿತ್ತು. ಇತ್ತೀಚೆಗೆ ಸಹ ಕಂಪ್ಲಿಯನ್ನು ನೂತನ ಜಿಲ್ಲೆಯಲ್ಲಿ ಸೇರಿಸಲಾಗಿತ್ತು. ಆದರೆ ಇದೀಗ ಪುನಃ ಕಂಪ್ಲಿ ತಾಲೂಕನ್ನು ನೂತನ ಜಿಲ್ಲೆಯಿಂದ ಕೈ ಬಿಟ್ಟಿರುವ ಬಗ್ಗೆ ಮಾಹಿತಿ ಇದೆ. ತಾಲೂಕು ವಿಜಯನಗರ ಜಿಲ್ಲೆಗೆ ಸೇರ್ಪಡೆ ಆಗದಿದ್ದಲ್ಲಿ ಪಟ್ಟಣದಲ್ಲಿ ಹಂತಹಂತವಾಗಿ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಇಟ್ಗಿ ವಿರೂಪಾಕ್ಷಿ, ಆದೋನಿ ರಂಗಪ್ಪ, ಅಗಳಿ ಪಂಪಾಪತಿ, ಸಜ್ಜೇದ ಸಿದ್ದಲಿಂಗಪ್ಪ, ರುದ್ರಪ್ಪ, ಎನ್.ಎಂ. ಪತ್ರೆಯ್ಯಸ್ವಾಮಿ, ಕೊಟ್ರೇಶ್ ಕುಮಾರ್, ಬಿ.ವೆಂಕಟೇಶ್, ಬಿ.ಸಂಗಪ್ಪ, ಜಿ.ಶಿವಪ್ಪ, ಬಿ.ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಿ
Advertisement