ಕಣ್ಣಾದವಳು…

0
Spread the love

ಒಂದು ವೇಳೆ ನಿನಗೆ ನಾ ಸಿಕ್ಕರೆ ನಿನ್ನಲ್ಲಿನ ಮಾತುಗಳು ಯಾವ ರೂಪ ತಾಳಿ ಹೇಳುವೆ ಎಷ್ಟು ದಿನಗಳು ನೀನು ಇಲ್ಲ ಅನ್ನೋ ಕೊರಗು ನನ್ನ ಮನುಷ್ಯ ಅನ್ನೋದನ್ನ ಮರೆಸಿದೆ ಹೇಗೆ ನಿನ್ನ ನೋಡಿದೆ ಯಾಕೆ ನಿನ್ನ ನೋಡಿದೆ ನನ್ನ ಕಣ್ಣಿಗೆ ನೀ ಯಾಕೆ ಬಿದ್ದೆ ಇದೆಲ್ಲವೂ ನನ್ನ ಪ್ರಶ್ನೆಯಾಗಿ ಕಾಡುತ್ತಿದೆ ಯಾವ ಬಂಧವೋ ? ಯಾವ ಅನುರಾಗವೋ ?ನಾ ಕಾಣೆ ನಿನ್ನ ಭಾಹು ಬಂಧನದಲ್ಲಿ ಸಿಲುಕಿ ನರಳಿ ನರಳಿ ನಿನ್ನ ನೆನಪಲ್ಲಿ ಹುಚ್ಚನಾಗಿ ಹೋಗಿದ್ದೇನೆ

Advertisement

“ಹೇಳಲು ನೂರಾರು ಮಾತುಗಳು ಮೂಡುವವು ನೀನು ಜೊತೆಗಿದ್ದಾಗ, ಇಂದು ಅದೇ ತುಟಿಯಿಂದ ಒಂದು ಕಿರುನಗೆಯು ಮೂಡುತ್ತಿಲ್ಲ ಕೈ ಕಾಲುಗಳಿಗೆ ಸ್ವಾಧೀನವೇ ಇದೆಯೋ ಇಲ್ಲವೋ ಅನ್ನೋ ಹಾಗೆ ದಿನಗಳ ಸಾಗಿಸುತ್ತಿದ್ದೇನೆ ,ಎಂದು ಒಂದು ದಿನ ನನ್ನ ಹುಡುಕಿ ಬರುವೆಯೇನೋ ಎಂದು.

“ನೀನಿಲ್ಲದ ಕ್ಷಣಗಳ ನೆನೆಸಿಕೊಂಡರೆ ಮೈಯೆಲ್ಲ ಬಿಸಿಯಾಗಿ ಹಾಕಿದ್ದ ಅಂಗಿ ಕೂಡ ಸುಟ್ಟು ಧಗ ಧಗನೆ ಉರಿದಂತೆ ಅನಿಸುತ್ತಿದೆ ಎಲ್ಲಿ ಹೋದೆ ನೀನು ಬಿಸಿಯಾದ ನನ್ನ ಮನವ ತಣಿಸಲು ನೀನು ಬರಬಾರದೆ ..ಒಂದು ಕ್ಷಣ ನಿನ್ನ ದೂರ ಮಾಡಿ ಇದ್ದವನಲ್ಲ ನಿನ್ನ ಮಡಿಲ ಬಿಟ್ಟು ಅರೆ ಕ್ಷಣವೂ ನಿದ್ದೆ ಹೋದವನಲ್ಲ ನಿನ್ನದೇ ಚಿಂತೆ ನನಗೀಗ …

“ನಿನಗೆ ನೆನಪಿದಿಯ ನಮ್ಮ ಮನೆಯ ಹಿಂಭಾಗದಲ್ಲಿ ಇರುವ ನದಿಯ ಬಳಿಯಲ್ಲಿ ದೋಣಿಯಲ್ಲಿ ಸಾಗಿ ಹೊಂಗೆ ಮರಗಳ ಗುಂಪುಲಿ ನೀನು ನನ್ನ ಕರೆದುಕೊಂಡು ಹೋಗಿ ಮುತ್ತಿನ ಮಳೆಗೆರೆವೆ ಹೊಂಗೆ ಮರದ ಹೂಗಳ ಕಿತ್ತು ನಿನ್ನ ಮುಡಿಯಲ್ಲಿ ಇರಿಸಿ ನಾನು ಹೇಗಿದ್ದೀನಿ ಚೆಂದ ಉಂಟಾ ಎಂದು ಕೇಳುತ್ತಿದ್ದೆ…

“ಅಲ್ಲೇ ಸಣ್ಣದಾಗಿ ಜೇನುಗಳು ಗೂಡು ಕಟ್ಟಿದ್ದು ಕಂಡಾಗ ನೀನು ನನಗೆ ಜೇನು ಬೇಕು ಎಂದು ಹಠ ಮಾಡಿದಾಗ ಹೊಂಗೆ ಮರದ ಎಲೆಗಳನ್ನು ಒಂದೊಂದೇ ಪೋಣಿಸಿ ನನ್ನ ಮುಖವೆಲ್ಲ ಕಾಣದಂತೆ ಮಾಡಿ ,ನನ್ನ ಹೊಟ್ಟೆ ಸುತ್ತಲೂ ಸಣ್ಣ ಸಣ್ಣ ತುಂಡುಗಳ ಮರದ ಎಳೆಯ ಕಡ್ಡಿಗಳನ್ನು ಇಟ್ಟು ದಾರದಲ್ಲಿ ಸುತ್ತಿ ಕಟ್ಟಿ ಸಿಹಿ ಜೇನು ತಂದು ಕೊಡು ಎಂದು ಹಠ ಮಾಡಿ ಜೇನು ಕೀಳಲು ಕಳಿಸುತ್ತಿದ್ದೆ ..

“ನೀನು ಮಾತ್ರ ಮರದ ಹಿಂದೆ ನಿಂತು ಕಣ್ಣು ಮುಚ್ಚಿಕೊಂಡು ಜೇನು ಕಿತ್ತಿದ್ದು ಆಯ್ಥ ಎಂದು ಅಲ್ಲಿಂದಲೇ ಕೇಳುತ್ತಿದ್ದೆ ಎಷ್ಟು ಕಷ್ಟು ಪಟ್ಟು ನಿನಗೆ ಜೇನು ಕಿತ್ತು ನಿನ್ನಲ್ಲಿಗೆ ಬಂದಾಗ” ಬಂಗಾರ ನಿನಗೆ ಏನು ಆಗಿಲ್ಲ ಅಲ್ವಾ ಎಂದು ಕೇಳಿ ಆ ಜೇನನ್ನು ನನಗೆ ಮೊದಲು ತಿನಿಸುತ್ತಿದ್ದೆ ..

“ನಿನಗಾಗಿ ತಂದಿದ್ದು ಎಂದಾಗ ನನಗಾಗಿ ನೀನು ಮೀನಮೇಷ ಎಣಿಸದೆ ಜೇನು ಕೀಳಲು ಹೋದಾಗ ನಿನಗೆ ಏನಾಗುತ್ತದೋ ಎಂಬ ಭಯ ನನ್ನಲಿತ್ತು ನಿನಗೆ ಏನು ಆಗಿಲ್ಲ ! ನನ್ನ ಖುಷಿ ಪಡಿಸುವುದೇ ನಿನ್ನ ಪ್ರೀತಿ ನಿನ್ನ ಪ್ರೀತಿಗಾಗಿ ನಾನು ,ಎಂದು ತಬ್ಬಿ ಹಿಡಿದು ಜೇನು ತಿನ್ನುವರೆಗೂ ನನ್ನ ನೀ ಬಿಡಲೇ ಇಲ್ಲ ..ನನಗೆ ಏನು ಅಗಬಾರದೆಂದು ಹೊಂಗೆ ಮರದ ಕಡ್ಡಿಗಳ ಕಟ್ಟಿದ್ದೇ ಕೂಡ .

“ಈಗಲೂ ಒಬ್ಬನೇ ಇದ್ದಾಗ ಅಲ್ಲಿಗೆ ಹೋಗಿ ಬರುತ್ತೇನೆ ನೀನಿದ್ದಾಗ ಹೊಂಗೆ ಮರದ ಚಿಗುರು ಎಷ್ಟೊಂದು ಸುಂದರವಾಗಿ ಚಿಗುರಿತ್ತು ,ಆದರೆ ನೀನಿಲ್ಲದಾಗ ಆ ಮರದ ಚಿಗುರು ಇಲ್ಲ ,ಆ ಮರದಲ್ಲಿ ಕಿತ್ತು ಮುಡಿದುಕೊಳ್ಳುತ್ತಿದ್ದ ಹೂಗಳ ಗೊಂಚಲು ಇಲ್ಲ ,
ಜೇನು ಕೂಡ ಮತ್ತೆ ಗೂಡು ಕಟ್ಟಿಲ್ಲ ,ನಿನ್ನ ಜೊತೆಗೆ ಇದ್ದ ಎಷ್ಟೋ ಆಸೆಗಳನ್ನು ನಾನೇ ಸಮಾಧಿ ಮಾಡಿದ್ದೇನೆ ನಿನ್ನ ನೆನೆದಾಗ ಆ ಕ್ಷಣಗಳ ನೆನೆದು ಅರಗಿಸಿಕೊಳ್ಳಲು ಆಗುತ್ತಿಲ್ಲ …

“ನೀನು ಎಲ್ಲಿ ಹೋದೆ ನನ್ನ ಒಂಟಿಯಾಗಿ ಬಿಟ್ಟು
ಎಷ್ಟೋ ದಿನಗಳು ನೀನು ನಾನು ಜೊತೆಯಲ್ಲೆ ಕುಳಿತು ಊಟ ಮಾಡಿದ ನೆನಪು ಹಸಿವಾದಾಗ ನಿನ್ನ ಕೈಗಳು ಕರೆಯುತ್ತದೆ ನನ್ನ ಹಸಿವು ನಿನ್ನನ್ನು, ಬಾ ಗೆಳತಿ ಕೈ ತುತ್ತು ನಿಡೆಂದು .

“ಎಷ್ಟೋ ದಿನಗಳು ಮಂಕಾಗಿ ಕುಳಿತಾಗ ನನ್ನ ಕಂಡ ಯಾಕೆ ಹೀಗೆ ಒಬ್ಬನೇ ಕುಳಿತೆ ಏನಾಗಿದೆ ನಿನಗೆ ನಿನ್ನ ಅಣೆಯಲ್ಲಿ ಅವಳನ್ನು ಬರೆದಿಲ್ಲ ಅವಳು ನಿನಗೆ ಇಷ್ಟೇ ದಿನಗಳು ಜೊತೆಯಲ್ಲಿ ಇದ್ದು ಕಣ್ಮರೆಯಾಗಿ ಹೋಗುವೆ ಎಂಬ ಸತ್ಯ ನಿನಗೂ ತಿಳಿಲಿಲ್ಲ ಆ ದೇವರು ನಮಗೂ ತಿಳಿಸಲಿಲ್ಲ ಎಂದು ಅಮ್ಮ ಹೇಳುವಾಗ ಕಣ್ಣಿಂದ ಕಂಬನಿ ತಾನಾಗಿ ಹೊರ ಬಂದಾಗ ಅಮ್ಮ ಸೇರಗಲ್ಲಿ ಕಣ್ಣೀರು ಹೊರೆಸಿ ಸಮಾಧಾನ ಮಾಡುತ್ತಿದ್ದಳು ಅಮ್ಮನಲ್ಲಿ ನಿನ್ನನ್ನೇ ಕಂಡಿದ್ದೆ ಕೂಡ ..

“ಒಂದು ದಿನವೂ ನನ್ನ ಬಿಟ್ಟು ಇರುವವಳು ನೀನಲ್ಲ
ಪ್ರತಿ ದಿನದ ರಾತ್ರಿಯಲ್ಲಿ ನಿದ್ದೆ ಮಾಡುವವನ ಪಕ್ಕದಲ್ಲಿ ಕೂತು ಎರಡು ಕೈಗಳಲ್ಲಿ ಕೆನ್ನೆ ಹಿಡಿದು ಬಂಗಾರ ಎಷ್ಟು ಮುದ್ದಾಗಿ ಇದ್ದೀಯ ಎಂದು ಕೆನ್ನೆ ಸವರಿ ಮುತ್ತು ಕೊಟ್ಟು ಹೋಗುತ್ತಿದ್ದೆ ..

“ಒಮ್ಮೊಮ್ಮೆ ಅಮ್ಮನಲ್ಲಿ ಸಿಕ್ಕಿ ಬಿದ್ದಾಗ ಅವನು ನನ್ನ ಬಂಗಾರ ಅವನನ್ನು ಬೇರೆ ಎಲ್ಲೂ ಗಿರವಿ ಇಡಬೇಡ ಅಂತ ಅಮ್ಮನಿಗೆ ಕೈ ತೋರಿಸಿ ಹೇಳಿ ನಾಚಿ ಓಡಿ ಹೋಗುತ್ತಿದ್ದೆ ಇದೆಲ್ಲ ನನಗೆ ಯಾಕೆ ಮಾಡಿದೆ ಹೀಗೆ ಒಬ್ಬನನ್ನೇ ಬಿಟ್ಟು ಹೋಗುವುದಕ್ಕ?

“ಬರಿ ಸುಖದಲ್ಲಿ ಮಾತ್ರ ನಾನು ನಿನಗೆ ಪಾಲುದಾರ ಎಂದು ಹೇಗೆ ಭಾವಿಸಿದೆ ?..ನಾನು ನಿನ್ನ ಸ್ವತ್ತೆಂದು ನಿನ್ನ ನೋಡಿದಾಗಲೇ ನಿನ್ನ ಪ್ರೀತಿಯಲ್ಲಿ ಬಿದ್ದಾಗಲೇ ನಿನ್ನೆಲ್ಲ ಜವಾಬ್ದಾರಿ ನನ್ನದು ಎಂದು ಯಾಕೆ ಅರಿವಾಗಲಿಲ್ಲ? ಆ ಒಂದು ವಿಷಯವನ್ನು ಮುಚ್ಚಿಟ್ಟು ಏನನ್ನು ಸಾಧಿಸಲು ನೀ ಒಂಟಿಯಾಗಿ ಮಾಡಿ ಒಂದು ಹೆಜ್ಜೆ ಮುಂದೆ ಹೋಗಿಬಿಟ್ಟೆ.

“ನೀನು ನನ್ನ ಬಂಗಾರ ಎಂದು ಕಾಗೆ ಬಂಗಾರ ಅಲ್ಲ ಅಂತ ಪ್ರತಿಕ್ಷಣವೂ ಮುದ್ದಿಸುವ ಪ್ರೀತಿಯನ್ನು ಬೇರೆ ಯಾರು ನನಗೆ ಕೊಡುವರು? ನನ್ನೆರಡು ತುಟಿಗಳ ಹಿಡಿದು ನಿನ್ನ ತುಟಿಗಳ ಹತ್ತಿರ ಬರಸೆಳೆದು ಚುಂಬಿಸುವ ಮೊದಲೇ ನಾಚಿಕೆ ಎಂದು ಕೈಗಳಲ್ಲಿ ಮೊಗವನ್ನು ಮುಚ್ಚಿಕೊಳ್ಳುವ ಆ ತುಂಟಾ ತನವನ್ನು ಯಾರಲ್ಲಿ ಕಾಣಲಿ ?

“ನೀನೇ ಹೇಳು ನೀನು ಮಾಡಿದ್ದು ಸರಿನ ? ಸುಳ್ಳು ಯಾಕೆ ಹೇಳಿದೆ ಒಂದೇ ಒಂದು ಮಾತು ನನಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಯಾಕೆ ಹೇಳಲಿಲ್ಲ ಜಾಸ್ತಿ ದಿನ ನಾ ಉಳಿಯುದಿಲ್ಲ ಎಂಬ ಸತ್ಯ ಯಾಕೆ ನಿನ್ನಿಂದ ಮುಚ್ಚಿ ಇಟ್ಟೇ, ನಿನ್ನನು ಪಡೆದ ನಾನೇ ಧನ್ಯ ಯಾವ ಪುಣ್ಯವೋ ? ಈ ಜನ್ಮದಲ್ಲಿ ನೀ ನನಗೆ ಸಿಕ್ಕಿದ್ದಿಯ ನಿಜವಾಗಿ ಇದು ನನ್ನ ಪುಣ್ಯವಲ್ಲ ಅಮ್ಮನ ಪುಣ್ಯ ಅಮ್ಮನಿಗೆ ಎಂತ ಸೊಸೆ ಸಿಕ್ಕಿದ್ದಾಳೆ ಎಂದು ಎಷ್ಟು ಸಂತೋಷ ಪಟ್ಟಿತ್ತು ಈ ಹೃದಯ ..

“ಇಂದು ಅದೇ ಸಂತೋಷ ಕಸಿದು ನನ್ನಲ್ಲಿಯೂ ಹೇಳದೆ ಮೌನವಾಗಿ ನಿದಿರೆಗೆ ಜಾರಿದೆ ಯಾಕೆ
ಈ ಸತ್ಯ ತಿಳಿದು ನಾನು ಕಂಗಾಲಾಗಬಾರದು ಎಂದು,
ಬಂಗಾರ ನಾನು ಇಲ್ಲವೆಂದು ನೀನು ಕೊರಬೇಡ ನಿನ್ನನ್ನು ಪ್ರತಿ ದಿನ ಪ್ರತಿ ಕ್ಷಣ ನಿನ್ನ ನೋಡಬೇಕು ಎನ್ನುವ ಹಠದಿಂದ ನನ್ನರೆಡು ಕಣ್ಣುಗಳನ್ನು ನನ್ನ ಅಮ್ಮನಿಗೆ ದಾನವಾಗಿ ನೀಡಿದ್ದೇನೆ ಇದು ನನ್ನ ಕನಸು ಕೂಡ, ನನ್ನ ಅಮ್ಮನಿಗೆ ಕಣ್ಣು ಕಾಣಿಸುವುದಿಲ್ಲ ಆದರೆ ನಾನು ಹೋದಮೇಲೆ ನನ್ನಮ್ಮನಿಗೆ ನೀನೇ ಮಗನು ನೀನೇ ಮಗಳು ಬಂಗಾರ, ನಾನು ಇಲ್ಲವೆಂದು ಎಂದಿಗೂ ಕಣ್ಣೀರು ಹಾಕದಿರು ನಾ ಸತ್ತರು ನಿನ್ನಲ್ಲೇ ನಿನ್ನ ಮುಂದೆ ಕಣ್ಣಾಗಿರುವೆ ,ಕಾಣಿಸುತ್ತಿರುವೆ …ನಿನ್ನಲ್ಲೇ ನಾನು ಬಿಂಬವಾಗಿರುವೆ ಸದಾ ನಗುತ್ತಿರು ಎಂದು ಕಾಗದ ಬರೆದು ನಿನ್ನನ್ನೇ ನನಗೆ ತ್ಯಾಗ ಮಾಡಿ ಮರೆಯಾದೆ ನೀನು ….?

“ಕೊನೆಯದಾಗಿ ಅಳಬೇಡ ಬಂಗಾರ ಎಂಬ ಮಾತೊಂದು ಹೇಳಿ ನೀನು ಬಾನಿಗೆ ನಕ್ಷತ್ರವಾದೆ ಭೂಮಿಲಿ ನೀ ಇಲ್ಲದೆ ನಾ ಅನಾಥವಾದೆ…

✍️ಕವಿತೆಗಳ ಸಾಲಲ್ಲಿ ಲೋಹಿತ್


Spread the love

LEAVE A REPLY

Please enter your comment!
Please enter your name here