ಕನ್ನಡಿಗರ ಆಕ್ರೋಶದಿಂದ ಬುದ್ಧಿ ಕಲಿತ ಅಮೇಜಾನ್ ಕಂಪನಿ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಕನ್ನಡಿಗರ ಆಕ್ರೋಶದಿಂದಾಗಿ ಅಮೇಜಾನ್ ಗೆ ಬುದ್ಧಿ ಬಂದಿದೆ. ಭಾರತದ ಅತ್ಯಂತ ಕೊಳಕು, ಅಸಹ್ಯ ಭಾಷೆ ಕನ್ನಡ ಎಂದು ಸರ್ಚ್ ನಲ್ಲಿ ತೋರಿಸಿದ್ದ ಗೂಗಲ್, ಗೂಗಲ್ ಗೆ ಕನ್ನಡಿಗರು ತಕ್ಕ ಪಾಠ ಕಲಿಸಿದ್ದಾರೆ. ವಿಶ್ವದ ಅತಿದೊಡ್ಡ ಇ – ಕಾಮರ್ಸ್ ಕಂಪನಿಯಾಗಿರುವ ಅಮೇಜಾನ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಕೆನಡಾದ ಅಮೇಜಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜದ ಚಿತ್ರ, ಅಶೋಕ ಚಕ್ರದ ಲಾಂಛನವಿರುವ ಮಹಿಳೆಯರ ಒಳ ಉಡುಪುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಕುರಿತು ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಕನ್ನಡಪರ ಸಂಘಟನೆಗಳು, ಕನ್ನಡಿಗರು, ಸಚಿವರು ಆಕ್ರೋಶ ಹೊರ ಹಾಕಿದ್ದರು. ಸದ್ಯ ಆ ಚಿತ್ರವನ್ನು ಅಮೇಜಾನ್ ಈಗ ತೆಗೆದು ಹಾಕಿದೆ.

ವಿಮೆನ್ಸ್ ಫ್ಲ್ಯಾಗ್ ಆಫ್ ಕರ್ನಾಟಕ ಒರಿಜಿನಲ್ ಡಿಸೈನ್ ಎಂಬ ಹೆಸರಿನಲ್ಲಿ ಅಮೇಜಾನ್, ಈ ಬಿಕಿನಿಯನ್ನು ಮಾರಾಟ ಮಾಡಲು ಪ್ರಯತ್ನಿಸಿತ್ತು. ಇದಕ್ಕ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದ ಫ್ಲಾಗ್ ಡಿಸೈನ್ನ ಪ್ರಾಡಕ್ಟ್ ಎಂದು ನಮೂದಿಸಲ್ಪಟ್ಟಿದ್ದ ಕನ್ನಡ ಧ್ವಜವಿರುವ ಮಹಿಳೆಯರ ಒಳಉಡುಪುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ ಅಮೇಜಾನ್ ಗೆ ಟ್ಯಾಗ್ ಮಾಡಿ ವಿರೋಧಿಸಲಾಗಿತ್ತು.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಕೆನಡಾದ ಅಮೇಜಾನ್ ಸಂಸ್ಥೆ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಮೇಜಾನ್ ಕ್ಷಮೆ ಯಾಚಿಸದಿದ್ದರೆ ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎಂದಿದ್ದರು.

2 ದಿನಗಳ ಹಿಂದಷ್ಟೇ ಗೂಗಲ್ನಲ್ಲಿ ವೆಬ್ ಸೈಟ್ ಲಿಂಕ್ವೊಂದು ಕನ್ನಡ ಭಾರತದ ಅತ್ಯಂತ ಕೊಳಕು ಭಾಷೆ ಎಂದು ತೋರಿಸುತ್ತಿತ್ತು. ಭಾರತದ ಅಗ್ಲಿಯೆಸ್ಟ್ ಭಾಷೆ ಯಾವುದು ಎಂದು ಸರ್ಚ್ ಮಾಡಿದರೆ ಗೂಗಲ್ ನಲ್ಲಿ ಕನ್ನಡ ಎಂದು ತೋರಿಸುತ್ತಿತ್ತು. ಇದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಗೂಗಲ್ ಕ್ಷಮೆಯಾಚಿಸಿತ್ತು. ಅದರಲ್ಲಿಯೂ ಕನ್ನಡದಲ್ಲಿಯೇ ಕ್ಷಮೆ ಕೇಳಿತ್ತು.


Spread the love

LEAVE A REPLY

Please enter your comment!
Please enter your name here