ವಿಜಯಸಾಕ್ಷಿ ಸುದ್ದಿ, ಗದಗ
ಇಲ್ಲಿನ 35ನೇ ವಾರ್ಡ್ ನ ಕುರ್ತಕೋಟಿ ಬಸಪ್ಪನಗರದಲ್ಲಿ ಕಲ್ಪತರು ಸೇವಾ ಸಂಘದಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. ಪಾರ್ವತಿ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು.

ನಂತರ ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಪೌರಕಾರ್ಮಿಕರು, ನಿರ್ಗತಿಕರಿಗೆ, ಬೀದಿ ದನಕರುಗಳಿಗೆ, ಆಹಾರ ವ್ಯವಸ್ಥೆ ಮಾಡಲಾಯಿತು. ಹಣ್ಣು ಬಿಸ್ಕೆಟ್ ನೀರಿನ ಬಾಟಲ್ ಗಳನ್ನು ವ್ಯವಸ್ಥೆ ಮಾಡಿದ ದಾನಿಗಳಾದ ಆಶೀಸ್ ಖಂಡಪ್ಪಗೌಡರ, ಸಿದ್ದು ಕಲಾಬಾಗ್ಲಿಮಠ, ಶಂಕರಗೌಡ್ರ ಪಾಟೀಲ್ ಇವರಿಗೆ ಕಲ್ಪತರು ಸೇವಾ ಸಂಘದ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.



