ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
Advertisement
ನೆಲೆ ಇಲ್ಲದ ಕಾಂಗ್ರೆಸ್ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದೆ. ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಹೇಳುತ್ತೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಆರ್.ಎಸ್.ಎಸ್-ತಾಲಿಬಾನ್ ಎರಡೂ ಒಂದೇ ಎಂಬ ಕೆಪಿಸಿಸಿ ಕಾರ್ಯದರ್ಶಿ ಧೃವನಾರಾಯಣ್ ಹೇಳಿಕೆಗೆ ಚಿಕ್ಕಮಂಗಳೂರಿನಲ್ಲಿ ಕೇಂದ್ರ ಸಚಿವೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮನಸ್ಥಿತಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದಾಗಿತ್ತು. ಅದಕ್ಕೆ ಅವರೇ ಕಾಶ್ಮೀರದಲ್ಲಿ ಸಮಸ್ಯೆ ಜೀವಂತವಾಗಿಟ್ಟಿದ್ದರು. ಈಗ ಕಾಶ್ಮೀರದ ಸಮಸ್ಯೆ ಹೋಗಿ ಭಯೋತ್ಪಾದಕರ ಹುಟ್ಟಡಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ
ಯಾರು ದೇಶದ್ರೋಹಿಗಳು, ದೇಶಭಕ್ತರು ಜನರಿಗೆ ಗೊತ್ತು, ಅವರು ಉತ್ತರಿಸುತ್ತಾರೆ ಎಂದು ಹೇಳಿದರು.