- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯ
ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕು ಅಂದ್ರೆ ಜೈಲಿಗೆ ಹೋಗಬೇಕು. ಇಲ್ಲ ಭ್ರಷ್ಟಾಚಾರ ಮಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಈಗ ನಿರಪರಾಧಿ ಅಥವಾ ಅಪರಾಧಿಯೂ ಅಲ್ಲ, ಆಪಾದಿತ. ಹೀಗಿರುವಾಗ ಅವರನ್ನು ಸಮರ್ಥನೆ ಮಾಡಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಕಾಂಗ್ರೆಸ್‍ನ ರಾಜಕೀಯ ವ್ಯವಸ್ಥೆಯ ಒಂದು ಭಾಗ. ಆ ಪಕ್ಷದಲ್ಲಿ ಗುಂಡಾಗಿರಿ ಪ್ರಮೋಷನ್‍ಗೆ ಇರುವ ಮಾನದಂಡ. ಡಿಕೆಶಿ ಅವರು ಬೆಳೆದ ಬಂದ ರೀತಿಯಲ್ಲೇ ಆಲೋಚನೆ ಮಾಡುತ್ತಿದ್ದಾರೆ.
ಹಿಂದೆ ರಾಜೀವ್ ಗಾಂಧಿ ಅವರಿಗೆ ಗೂಂಡಾ ಎಂಬ ಆಪಾದನೆ ಬಂದಾಗ ಗೂಂಡಾಗಳಿಗೆ ನಾವು ವಿಶೇಷ ಆದ್ಯತೆ ಕೊಡಬೇಕೆಂದು ಹೇಳಿದ್ದರು. ಉಳಿದವರು ಕಾಂಗ್ರೆಸ್ ಬಗ್ಗೆ ಯೋಚನೆ ಮಾಡಬೇಕಾಗಿದೆ. ಜನ ಕಾಂಗ್ರೆಸ್ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.