ವಿಜಯಸಾಕ್ಷಿ ಸುದ್ದಿ, ಮುಂಬಯಿ
ರಾಜ್ಯಸಭೆಯ ಕಾಂಗ್ರೆಸ್ ಸಂಸದ ರಾಜೀವ್ ಸತವ್ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಕುರಿತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೆವಾಲಾ, ‘ನಿಶಾಬ್! ಇಂದು, ಯುವ ಕಾಂಗ್ರೆಸ್ ನಲ್ಲಿ ನನ್ನೊಂದಿಗೆ ಸಾರ್ವಜನಿಕ ಜೀವನದ ಮೊದಲ ಹೆಜ್ಜೆ ಇಟ್ಟ ಒಬ್ಬ ಸಹೋದ್ಯೋಗಿ ಕಳೆದುಕೊಂಡಿದ್ದೇನೆ. ಆದರೆ ಇಂದು, ರಾಜೀವ್ ಸತವ್ ಅವರ ಸರಳತೆ, ನಿಸ್ಸಂದಿಗ್ಧವಾದ ನಗೆ, ನಾಯಕತ್ವ ಮತ್ತು ಪಕ್ಷದ ನಿಷ್ಠೆ ಮತ್ತು ಸ್ನೇಹ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ನನ್ನ ಗೆಳೆಯನಿಗೆ ಶುಭ ವಿದಾಯ ! ನೀವು ಎಲ್ಲಿಯೇ ಇರಿ, ಹೊಳೆಯುತ್ತಿರಿ ಎಂದು ಭಾರವಾದ ಹೃದಯದಿಂದ ಬರೆದುಕೊಂಡಿದ್ದಾರೆ.
ಸಂಸದ ರಾಜೀವ್ ಸತವ್ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ, ಅದರಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಆದರೆ, ಏ. 22ರಂದು ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡು ಬಂದಿದೆ. ಕೂಡಲೇ ಅವರನ್ನು ಪುಣೆಯ ಜಹಾಂಗೀರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಅವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.



