ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಎರಡು ದಿನಗಳ ಹಿಂದೆ ಕಾಣಿಯಾಗಿದ್ದ ಮಹಿಳೆ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಹುಡ್ಕೋ ಕಾಲೂನಿಯ ಅನಸೂಯಾ ಚಿಕ್ಕನಗೌಡ್ರ ಎಂಬ ವೃದ್ಧೆಯ ಕಾಣಿಯಾಗಿ ಇಂದು ಶವವಾಗಿ ಪತ್ತೆಯಾದವರು.
ಸಾವಿನ ಹಾಟ್ ಸ್ಪಾಟ್ ಆಗಿರುವ ಭೀಷ್ಮಕೆರೆ ಪಕ್ಕದಲ್ಲಿ ಇರುವ ಸಿಂಹದಕೆರೆಯಲ್ಲಿ ಇಂದು ಬೆಳಗಿನ ಜಾವ ಮಹಿಳೆಯೊಬ್ಬರ ಶವ ತೇಲಾಡುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶಹರ ಠಾಣೆಯ ಪೊಲೀಸರು ಮಹಿಳೆಯ ಶವ ಪರಿಶೀಲಿಸಿದಾಗ ಹೆಸರು, ವಿಳಾಸ ಪತ್ತೆಯಾಗಿದೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



