ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗಷ್ಟೇ ಕೊರೊನಾ ಗೆದ್ದು ಬಂದಿದ್ದಾರೆ. ಎಷ್ಟೋ ಅಭಿಮಾನಿಗಳ ಪೂಜಾ ಫಲದಿಂದಾಗಿ ನಾನು ಬದುಕಿ ಬಂದೆ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದರು. ಸದ್ಯ ಅವರ ಸಾಮಾಜಿಕ ಕಾಳಜಿಗೆ ಮಹಿಳೆಯೊಬ್ಬರು ಹರಿಸಿ, ಆಶೀರ್ವದಿಸಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಕಿಚ್ಚ ಅವರು ಅಭಿಮಾನಿಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಈ ಕುರಿತು ಸುದೀಪ್ ಅವರ ಅಭಿಮಾನಿ ಸೌಮ್ಯ, ಸಹಾಯ ಮಾಡಿರುವ ಕುರಿತು ವೀಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಸಾಯುವವರೆಗೂ ನಿಮ್ಮ ಹೆಸರು ಹೇಳಿಕೊಂಡು ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ತಾಳಿ ಭಾಗ್ಯವನ್ನು ಉಳಿಸಿದ್ದೀರಾ ನೀವು. ಆ ಭಗವಂತ ನನ್ನ ಆಯಸ್ಸನ್ನೆಲ್ಲ ನಿಮಗೆ ನೀಡಲಿ ಎಂದು ಸೌಮ್ಯ ಸುದೀಪ್ ಅವರನ್ನು ಹರಿಸಿದ್ದಾರೆ.
ಸೌಮ್ಯ ಅವರ ಪತಿ ಇತ್ತೀಚೆಗೆ ರಕ್ತದಲ್ಲಿ ಸೋಂಕು ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಅದರಿಂದ ಅವರು ಚೇತರಿಸಿಕೊಂಡಿದ್ದರು. ಆನಂತರ ಮನೆಗೆ ಬಂದ ಮೇಲೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅಲ್ಲದೇ, ಸೌಮ್ಯ, ಪತಿಗೆ, ತಾಯಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಆ ಸಮಯದಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು.
ರೆಮಿಡಿಸಿವರ್ ಇಂಜೆಕ್ಷನ್ ತಂದರೆ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆ ಹೇಳಿದೆ. ಎಲ್ಲಿ ಹುಡುಕಿದರೂ ಸೌಮ್ಯ ಅವರಿಗೆ ರೆಮಿಡಿಸಿವಿರ್ ಇಂಜೆಕ್ಷನ್ ಸಿಗಿಲ್ಲ.
20 ಸಾವಿರ ರೂ. ನೀಡಿ ಸೌಮ್ಯಾ ಇಂಜೆಕ್ಷನ್ ಕೊಂಡುಕೊಂಡಿದ್ದಾರೆ. ಆದರೆ, ಆ ವೇಳೆಗಾಗಲೇ ಅವರಿಗೆ ಸುಮಾರು ರೂ. 1.50 ಲಕ್ಷ ಖರ್ಚಾಗಿತ್ತು. ಇಂತಹ ಸಂದರ್ಭದಲ್ಲಿ ರೂ. 50 ಸಾವಿರ ಮುಂಗಡ ಹಣ ನೀಡಬೇಕು ಎಂದು ಆಸ್ಪತ್ರೆ ತಿಲಿಸಿದೆ. ಚಿಕಿತ್ಸೆ ಮುಗಿದ ನಂತರ ರೂ. 1.30 ಲಕ್ಷ ಬಿಲ್ ಆಗಿದೆ. ಆಗ ಸೌಮ್ಯ ಅವರು ಯಾರನ್ನೂ ಬೇಡಿದರೂ ಹಣ ಸಿಗಲಿಲ್ಲ. ಆಗ ನಟ ಸುದೀಪ್ ಅವರು ಈ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಹೀಗಾಗಿ ಸೌಮ್ಯ ಅವರು ಸುದೀಪ್ ಅವರಿಗೆ ಹಾರೈಸಿದ್ದಾರೆ.