ವಿಜಯಸಾಕ್ಷಿ ಸುದ್ದಿ, ಕೊಪ್ಪಳ
Advertisement
ಕೃಷಿ ಹೊಂಡದಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಶುಕ್ರವಾರ ಅಪರಾಹ್ನ ಸಂಭವಿಸಿದೆ.
ಮೃತ ಬಾಲಕಿಯರನ್ನು
ಕವಿತಾ(10), ಸಂಜನಾ(9) ಎಂದು ಗುರುತಿಸಲಾಗಿದೆ.
ಹುಲಿಹೈದರ ಗ್ರಾಮ ವ್ಯಾಪ್ತಿಯ ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಘಟನೆ ನಡೆದಿದ್ದು,
ವಿಶ್ವನಾಥ ರೆಡ್ಡಿ ಅವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಮೃತ ಬಾಲಕಿಯರ ಪಾಲಕರು ಬಂದಿದ್ದರು ಎನ್ನಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ
ಮುಗಿಲು ಮುಟ್ಟಿತ್ತು.
ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.