ವಿಜಯಸಾಕ್ಷಿ ಸುದ್ದಿ, ಗದಗ
ಪತಿಯಿಂದ ದೂರವಾಗಿದ್ದ ಮಹಿಳೆಯೊಂದಿಗೆ
ಮೂರು ವರ್ಷಗಳಿಂದ ಸಂಬಂಧ ಇಟಕೊಂಡಿದ್ದ ಲಾರಿ ಚಾಲಕನೊಬ್ಬ ಆ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದು, ಬಿಡಿಸಲು ಬಂದ ಮಹಿಳೆಯ ತಾಯಿಯ ಮೇಲೂ ಹಲ್ಲೆ ನಡೆಸಿದ ಘಟನೆ ನಡೆದಿದೆ
ಜಿಲ್ಲೆಯ ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದಲ್ಲಿ ಈ ಘಟನೆ ನಡೆದದ್ದು, ಆರೋಪಿ ಲಾರಿ ಚಾಲಕ ಗೂಡಸಾಬ್ ಅಮೀನಸಾಬ್ ನದಾಫ್ ಎಂಬಾತ ಅದೇ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಇಟಗೊಂಡಿದ್ದ. ಮೂರು ವರ್ಷಗಳ ಕಾಲ ಚೆನ್ನಾಗಿಯೇ ಇದ್ದ ಸಂಬಂಧ ಇತ್ತೀಚೆಗೆ ಹಳಸಿದೆ. ಆ ಮಹಿಳೆ ಇತ್ತೀಚೆಗೆ ಗೂಡುಸಾಬ್ ನನ್ನು ನಿರ್ಲಕ್ಷ್ಯ ಮಾಡಲು ಶುರು ಹಚ್ಚಗೊಂಡಿದ್ದಾಳೆ.
ಇದರಿಂದಾಗಿ ಆರೋಪಿ ಗೂಡುಸಾಬ್ ನಿಗೆ ಸಿಟ್ಟು ಬಂದಿದೆ. ಆಗಾಗ ಆ ಮಹಿಳೆಯ ಮನೆ ಮುಂದೆ ತಿರುಗಾಡುತ್ತಾ ಅವಾಚ್ಯ ಪದಗಳನ್ನು ಬಳಸಿ ಬೈದಾಡುತ್ತಾ ಹೋಗುತ್ತಿದ್ದ.
ಹೀಗೆ ಕೈಯಲ್ಲಿ ಕೊಡಲಿ ಹಿಡಕೊಂಡ ಆರೋಪಿ ಮೊನ್ನೆ ಮಹಿಳೆಯ ಮನೆ ಮುಂದೆ ಹೋಗಿ ದುಡ್ಡು ಕೊಡು ಅಂತ ಕೇಳಿದ್ದಾನೆ. ನೀ ಯಾವುದು ದುಡ್ಡು ಕೊಟ್ಟಿಲ್ಲ ಅಂತ ಮಾತಿಗೆ ಮಾತು ಬೆಳೆದ ಜಗಳ ದೀರ್ಘಕ್ಕೆ ಹೋಗಿ ಕೈಯಲ್ಲಿದ್ದ ಇದ್ದ ಕೊಡಲಿ ಕಾವಿನಿಂದ ಹಲ್ಲೆ ಮಾಡಿದ್ದಾನೆ. ಬಿಡಿಸಲು ಬಂದ ಆ ಮಹಿಳೆಯ ತಾಯಿಗೂ ಗಾಯವಾಗಿದೆ.
ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ಗೂಡುಸಾಬ್ ಪೊಲೀಸರ ಅತಿಥಿಯಾಗಿದ್ದಾನೆ
ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.