ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಬಿಜೆಪಿ ರಾಷ್ಟ್ರೀಯ ಪರಿಷತ್ತು ಸದಸ್ಯ ಹಾಗೂ ಹಿರಿಯ ಮುಖಂಡ ಸಿ.ವಿ ಚಂದ್ರಶೇಖರ 53ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಸ್ವತಃ ತಾವೇ ಜನರಿಗೆ ಮಾಸ್ಕ್ ವಿತರಿಸಿ ಕೊರೊನಾದ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಎಚ್ಚರಿಕೆ ವಹಿಸಬೇಕು ಎಂದು ಜಾಗೃತಿ ಮೂಡಿಸುವ ಮೂಲಕ ಅಭಿಮಾನಿಗಳು ಸರಳವಾಗಿ ಸಿವಿಸಿಯವರ ಹುಟ್ಟುಹಬ್ಬವನ್ನು ಆಚರಿಸಿದರು.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಸಲ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲು ಕಾರ್ಯಕರ್ತರು, ಅಭಿಮಾನಿಗಳಿಗೆ ಕರೆ ನೀಡಿದ್ದೇನೆ ಎಂದು ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ ಹೇಳಿದರು.
ಸಿ ವಿ ಚಂದ್ರಶೇಖರ ರವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ನಗರದ ವೃದ್ಧಾಶ್ರಮದಲ್ಲಿ ಬ್ರೆಡ್, ಹಣ್ಣು, ಹಂಪಲು, ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಿಸಿದರು.
ಈ ಸಂಧರ್ಭದಲ್ಲಿ ಕಾರ್ಯಕರ್ತರಾದ ದೇವರಾಜ ಹಾಲಸಮುದ್ರ, ಪ್ರವೀಣ್ ಇಟಗಿ, ಅಭಿನಂದನ್ ತುಂಬಳ, ಜ್ಯೋತಿ ಬಸು, ಮಹೆಬೂಬ ಕುದರಿಮೊತಿ, ನಯೀಮ, ಸಂತೋಷ ಮ್ಯಾಗಳಮನಿ, ದೇವರಾಜ ಮನ್ನಾಪುರ, ವೀರೇಶ ಗೌಡ, ಅವಿನಾಶ ಮ್ಯಾಗಳಮನಿ, ಉಮೇಶ್ ಕುರುಡೆಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

