ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಹಾಮಾರಿಯಿಂದಾಗಿ ಜನ ತತ್ತರಿಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಆಕ್ಸಿಜನ್ ಕೊರತೆ ತಾಂಡವಾಡುತ್ತಿದೆ. ಹೀಗಾಗಿ ನಟಿ ಶೃತಿ ಹರಿಹರನ್ ಅವರು ಕೂಡ ಇಂತಹ ತೊಂದರೆ ಅನುಭವಿಸಿ, ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸ್ನೇಹಿತರೊಬ್ಬರಿಗೆ ಬೆಡ್ ಕೊಡಿಸಲು ಶೃತಿ ಬರೋಬ್ಬರಿ 13 ಗಂಟೆಗಳ ಕಾಲ ಪರದಾಡಿದ್ದಾರೆ. ಈ ಕುರಿತು ಅವರೇ ಅವರ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನ ಸ್ನೇಹಿತರೊಬ್ಬರು ಕೊನಾದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಐಸಿಯುನಲ್ಲಿ ಬೆಡ್ ಕೊಡಿಸಲು ಸಾಕಷ್ಟು ಕಷ್ಟ ಪಡಬೇಕಾಯಿತು. ಬರೋಬ್ಬರಿ 13 ಗಂಟೆಗಳ ಕಾಲ ಬೆಡ್ ಗಾಗಿ ಪರದಾಡಬೇಕಾಯಿತು. ಆದರೆ, ಸರಿಯಾದ ಸಮಯಕ್ಕೆ ಬೆಡ್ ಸಿಗದ ಕಾರಣಕ್ಕೆ ಅವರು ಅವರು ನಿಧನರಾದರು ಎಂದು ನೋವು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ನಟ ಜಗ್ಗೆಶ್ ಅವರು ಕೂಡ ತಮ್ಮ ಸಹೋದರನಿಗೆ ಬೆಡ್ ಕೊಡಿಸುವುದಕ್ಕಾಗಿ ಸಾಕಷ್ಟು ಪರದಾಡಿದ್ದರು. ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಕಷ್ಟ ತೋಡಿಕೊಂಡಿದ್ದರು. ಕೊರೊನಾಗೆ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು ಅವರು ಸಹ ಸಾವನ್ನಪ್ಪಿದ್ದಾರೆ. ಹೀಗಾಗಿ ಪರಿಸ್ಥಿತಿ ತುಂಬಾ ಭೀಕರವಾಗಿದೆ.