ಗಜೇಂದ್ರಗಡ‌ ದಾಬಾ, ಹುಲಕೋಟಿ ಹೊಟೇಲ್ ಮೇಲೆ ದಾಳಿ; ಮದ್ಯ ಮಾರುತ್ತಿದ್ದ ನಾಲ್ವರು ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಮೇ‌ 27 ರಿಂದ ಜೂನ್ 1ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ, ಮದ್ಯ, ಅಗತ್ಯ ವಸ್ತುಗಳ ಮಾರಾಟ ಮಾಡದಂತೆ ಸಂಪೂರ್ಣ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಇದನ್ನು ಕೆಲವರು ಬಂಡವಾಳ ಮಾಡಿಕೊಂಡು ಹಣ ಗಳಿಸುವ ದಂದೆ ಮಾಡಿಕೊಂಡಿದ್ದಾರೆ.

ಸಂಪೂರ್ಣ ಲಾಕ್ ಡೌನ್ ಘೋಷಣೆ ಹೊರ ಬಿದ್ದ ಮರುದಿನವೇ ಜಿಲ್ಲೆಯ ಕೆಲವಡೆ ಮದ್ಯ ಖರೀದಿಸಿ ಸಂಗ್ರಹ ಮಾಡಿಕೊಂಡಿದ್ದರು.

ಇದನ್ನು ಅರಿತ ಜಿಲ್ಲೆಯ ಪೊಲೀಸರು ಅಲ್ಲಲ್ಲಿ ದಾಳಿ ಮಾಡಿ ಮದ್ಯ ಜಪ್ತಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ಗಜೇಂದ್ರಗಡ ಪಟ್ಟಣದ ತುಂಗಭದ್ರಾ ದಾಬಾ ಮೇಲೆ ದಾಳಿ ಮಾಡಿ ಸಂಗಪ್ಪ ಈಶ್ಚರಪ್ಪ ಹಾವೇರಿ ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿಎಸ್ಐ ಗುರುಶಾಂತ ದಾಸ್ಯಾಳ ಹಾಗೂ ಸಿಬ್ಬಂದಿ ಆತನನ್ನು ಬಂಧಿಸಿ, ಆತನಿಂದ 8735 ರೂ, ಗಳ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಗದಗ ತಾಲೂಕಿನ ವಿವಧೆಡೆ ಅಕ್ರಮವಾಗಿ ‌ಮದ್ಯ ಮಾರಾಟ ಮಾಡುತ್ತಿದ್ದವರ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಸಿಪಿಐ ರವಿಕುಮಾರ್ ಕಪ್ಪತನವರ್ , ಪಿಎಸ್ಐ ಅಜಿತಕುಮಾರ್ ಹೊಸಮನಿ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

ಕದಡಿ ಗ್ರಾಮದ ಅಡಿವೆಪ್ಪ ಮರಿಯಪ್ಪ ಚಲವಾದಿ ಎಂಬಾತನನ್ನು ಬಂಧಿಸಿ, ಆತನಿಂದ 27 ಸಾವಿರ ರೂ, ಮೌಲ್ಯದ ಬಿಯರ್ ಸೇರಿ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಗಾವರವಾಡ ಗ್ರಾಮದ ಪ್ರಕಾಶ್ ಎಂ ಬೆಟಗೇರಿ ಎಂಬಾತನನ್ನು ಬಂಧಿಸಿ, ಆತನಿಂದ 13ಸಾವಿರ ರೂ, ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ.

ಹುಲಕೋಟಿಯಲ್ಲೂ ದಾಳಿ ಮಾಡಿರುವ ಪೊಲೀಸರು ಮ್ಯಾಂಗೋ ಟ್ರೀ ಹೋಟೆಲ್ ಸಮೀಪದ ಶಿವಕುಮಾರ್ ರಾಮಚಂದ್ರ ನಾಯಕ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 5ಸಾವಿರ ರೂ,‌ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಗಜೇಂದ್ರಗಡ ಹಾಗೂ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.


Spread the love

LEAVE A REPLY

Please enter your comment!
Please enter your name here