ಗದಗನಲ್ಲೂ ಆರಂಭಗೊಂಡ ಸಂಘರ್ಷ; ಹಿಜಾಬ್ ಧರಿಸಿದ ವಿದ್ಯಾರ್ಥಿಗಳನ್ನು ಹೊರ ಹಾಕಿದ ಕಾಲೇಜು ಸಿಬ್ಬಂದಿ!

0
Spread the love

ತರಗತಿ ವಜಾ ಮಾಡಿ ಕಾಲೇಜಿಗೆ ರಜೆ ಘೋಷಣೆ

Advertisement

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಿಜಾಬ್-ಕೇಸರಿ ಕಿಚ್ಚು ಆರುತ್ತಿಲ್ಲ. ಹಿಜಾಬ್ ಹಾಕಿಕೊಂಡು ಬಂದಿರುವ ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿಗಳು ತರಗತಿಯಿಂದ ಹೊರ ಹಾಕಿದ್ದು, ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

ಗದಗನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕ್ಕೊಂಡು ಬಂದಿದ್ದಕ್ಕೆ ಕಾಲೇಜು ಸಿಬ್ಬಂದಿಗಳು ತರಗತಿಯಿಂದ ಹೊರಗೆ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು, ‘ನಿನ್ನೆ ತರಗತಿಗೆ ಕೇಸರಿ ಶಾಲು ಹಾಕಿಕೊಂಡು ಬಂದು, ತರಗತಿಯಲ್ಲಿ ಫೋಟೋ ತೆಗೆದುಕೊಂಡರು. ಅಲ್ಲದೇ, ಅವರನ್ನು ತರಗತಿಗೆ ಹಾಜರಾಗಲು ಅನುಮತಿಸಿದರು. ಇಷ್ಟು ದಿವಸ ಕೋಮು ಸೌಹಾರ್ದಯುತವಾಗಿ ಶಿಕ್ಷಣ ಕಲಿಯುತ್ತಿದ್ದೆವು. ಈಗ ನಮ್ಮನ್ನ ತರಗತಿಯಿಂದ ಹೊರಗೆ ಹಾಕಿಸಿ ಅವರು ಪಾಠ ಕೇಳುತ್ತಿದ್ದಾರೆ. ನಿನ್ನೆ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ಹಾಕುವಂತೆ’ ಎಂದು ಒತ್ತಾಯಿಸಿದರು.

‘ಕಾಲೇಜು ಪ್ರವೇಶ ಪಡೆಯುವಾಗಲೇ ಹಿಜಾಬ್ ಹಾಕ್ಕೊಂಡು ಬಂದರೆ ಅನುಮತಿ ಇಲ್ಲ ಅಂತಾ ಹೇಳಬೇಕಿತ್ತು. ನಾವು ಕಾಲೇಜು ಪ್ರವೇಶ ಪಡೆಯಬೇಕೋ, ಬೇಡ್ವೋ ಎಂಬ ಬಗ್ಗೆ ತೀರ್ಮಾನ ಮಾಡುತ್ತಿದ್ದೆವು. ಇಷ್ಟು ದಿವಸ ಹಿಜಾಬ್ ಹಾಕಿಕೊಂಡು ಬಂದರೆ ಸುಮ್ಮನಿದ್ದವರು ಈಗ್ಯಾಕೆ ಹಿಜಾಬ್ ಹಾಕಿಕೊಂಡು ಬಂದರೆ ತರಗತಿಯಿಂದ ಹೊರಗೆ ಹಾಕುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಪರೀಕ್ಷೆಗಳು ಸಮೀಪಿಸುತ್ತಿವೆ. ಈಗಷ್ಟೇ ಅತಿಥಿ ಉಪನ್ಯಾಸಕರು ಬಂದಿದ್ದಾರೆ. ಪರೀಕ್ಷೆಗೆ ಸಿದ್ದತೆ‌ ಮಾಡಿಕೊಳ್ಳಬೇಕು. ಹೀಗೆ ತರಗತಿಯಿಂದ ಹೊರಗೆ ಹಾಕಿದರೆ ನಾವು ಪರೀಕ್ಷೆ ಬರೆಯುವುದಾದರೂ ಹೇಗೆ?. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅವರು ಉತ್ತೀರ್ಣ ಮಾಡುತ್ತಾರೆಯೇ? ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು’ ಪ್ರಶ್ನಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು.


Spread the love

LEAVE A REPLY

Please enter your comment!
Please enter your name here