ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಸೋಮವಾರ ಸಂಜೆ 5ರ ವರೆಗೆ ಅನ್ ಲಾಕ್ ಘೋಷಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಸಾರಿಗೆ ಬಸ್ ಸಂಚಾರ ಪ್ರಾರಂಭವಾಗಲಿದೆ ಎಂದು ಗದಗ ಘಟಕದ ಡಿಪೋ ಮ್ಯಾನೇಜರ್ ಬಸಪ್ಪ ಪೂಜಾರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಾಳೆಯಿಂದ 150ಕ್ಕೂ ಅಧಿಕ ಬಸ್ ಗಳು ಸಂಚಾರ ನಡೆಸಲಿವೆ. ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ರಸ್ತೆಗೆ ಇಳಿಸುವ ಬಸ್ ಗಳ ಸಂಖ್ಯೆ ಹೆಚ್ಚಳವಾಗಲಿದೆ. ಜಿಲ್ಲೆಯಲ್ಲಿರುವ 480 ಶೆಡ್ಯೂಲ್ ಗಳಲ್ಲಿ ಶೇ. 30ರಷ್ಟು ಬಸ್ ಸಂಚಾರ ಮಾಡಲಿವೆ ಎಂದು ಹೇಳಿದ್ದಾರೆ.
ನಗರದಿಂದ ಪಟ್ಟಣಗಳಿಗೆ ಮಾತ್ರ ಬಸ್ ಸಂಚಾರ ನಡೆಸಲಿವೆ. ಗ್ರಾಮೀಣ ಭಾಗದ ಬಸ್ ಸಂಚಾರ ಸದ್ಯಕ್ಕೆ ಸ್ಥಗಿತ ಮಾಡಲಾಗಿದೆ. ಪ್ರಯಾಣಿಕರ ಸಂಚಾರದ ಮೇಲೆ ಅಲ್ಲಿಯೂ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ನಾಳೆಯಿಂದ ಬಸ್ ಸಂಚಾರ ಮಾಡುವುದರಿಂದಾಗಿ ಡಿಫೋ ಗಳಲ್ಲಿ ಬಸ್ ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಸ್ಯಾನಿಟೈಜರ್ ಸಿಂಪಡಣೆ ಮಾಡಲಾಗುತ್ತಿದೆ. ಬಸ್ ನಲ್ಲಿ ಪ್ರಯಾಣಿಕರ ಸಂಚಾರಕ್ಕೆ ದೈಹಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಎರಡನೇ ಡೋಸ್ ಲಸಿಕೆ ಪಡೆದ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಮೊದಲ ಆದತ್ಯೆ ನೀಡಲಾಗಿದೆ. ಮೊದಲನೇ ಡೋಸ್ ಲಸಿಕೆ ಪಡೆದ ಸಿಬ್ಬಂದಿಗಳು ಡ್ಯೂಟಿಗೆ ಹಾಜರಾಗಲು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.