ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಗದುಗಿನ ರಾಜೀವಗಾಂಧಿ ನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
2024ರ ಲೋಕಸಭಾ ಚುನಾವಣೆಗೆ ಮೊದಲ ಸಲ ಮತದಾನ ಮಾಡಿದ ಫಹಮಿದಾ ಎಂ.ಕಾಗದಗಾರ ವೆಂಕಟೇಶ್ ಟಾಕೀಜ್ ಹಿಂಭಾಗದ ವಾರ್ಡ್ ಸಂಖ್ಯೆ 27ರ ನಿವಾಸಿಯಾಗಿ, ಎಚ್ಸಿಈಎಸ್ (ರೆಡ್ಡಿ) ಶಾಲೆಯಲ್ಲಿ ಬೂತ್ ಸಂಖ್ಯೆ 99/764ರಲ್ಲಿ ಮತದಾನ ಮಾಡಿ ಹೆಮ್ಮೆಯ ನಗೆ ಬೀರಿದರು.
ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಕುಟುಂಬದ ಸದಸ್ಯರೊಂದಿಗೆ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.6ರ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮಂಗಳವಾರ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರಲ್ಲಿ ಗದುಗಿನ ಗಣ್ಯ ವ್ಯಾಪಾರಸ್ಥರಾದ ಮುರುಘರಾಜೇಂದ್ರ ಬಡ್ನಿ, ಪ್ರತಿಭಾ ಮುರುಘರಾಜೇಂದ್ರ ಬಡ್ನಿ ದಂಪತಿಗಳು ತಮ್ಮ ಮತವನ್ನು ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ರಡ್ಡಿ ಕಾಲೇಜಿನ ಮತಗಟ್ಟೆ ಸಂಖ್ಯೆ 299ರಲ್ಲಿ ಚಲಾಯಿಸಿದರು.
ಸಾರ್ವತ್ರಿಕ ಚುನಾವಣೆ-2024ರ ಹಾವೇರಿ ಲೋಕಸಭಾ ಮತಕ್ಷೇತ್ರದಲ್ಲಿ ಮಂಗಳವಾರ ನಡೆದ ಮತದಾನದಲ್ಲಿ ರವಿಪ್ರಕಾಶ, ಅನಿತಾ ರಡ್ಡಿ ದಂಪತಿಗಳು ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ರಡ್ಡಿ ಕಾಲೇಜನ ಮತಗಟ್ಟೆ ಸಂಖ್ಯೆ-299ರಲ್ಲಿ ತಮ್ಮ ಮತದಾನ ಮಾಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದಲ್ಲಿ ಮಂಗಳವಾರ ನಡೆದ ಮತದಾನದಲ್ಲಿ ಕೆಎಸ್ಆರ್ಟಿಸಿ ಕಾರ್ಮಿಕ ನಾಯಕ ಹೆಚ್.ಸಿ. ಕೊಪ್ಪಳ ಮತ್ತು ಪರಿವಾರದವರು ಕೆಎಸ್ಆರ್ಟಿಸಿ ಕಾಲೋನಿ ಸಾರಿಗೆ ನಗರದಲ್ಲಿ ಮತದಾನ ಮಾಡಿದರು.
ಮಂಗಳವಾರ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಗದಗ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕರಾದ ರಮೇಶ ಎನ್.ಸಜ್ಜಗಾರ ವಾರ್ಡ್ ನಂ. 14ರಲ್ಲಿ ತಮ್ಮ ಮತ ಚಲಾಯಿಸಿದರು.
ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಧಾರವಾಡ ಲೊಕಸಭಾ ಕ್ಷೇತ್ರ ವ್ಯಾಪ್ತಿಯ ಶಿಗ್ಗಾವಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಅವರ ಜೊತೆಯಲ್ಲಿ ಅವರ ಪತ್ನಿ ಚನ್ನಮ್ಮ ಬೊಮ್ಮಾಯಿ, ಪುತ್ರ ಭರತ ಬೊಮ್ಮಾಯಿ ಹಾಗೂ ಪುತ್ರಿ ಅದಿತಿ ಬೊಮ್ಮಾಯಿ ಇದ್ದರು.
ಮಂಗಳವಾರ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಗರದ ಗಣ್ಯ ಉದ್ದಿಮೆದಾರ, ಬಿಜೆಪಿಯ ಹಿರಿಯ ಮುಖಂಡರಾದ ಅಶೋಕ ಸಂಕಣ್ಣವರ, ಪತ್ನಿ ಶಕುಂತಲಾ ಅಶೋಕ ಸಂಕಣ್ಣವರ ಮತ್ತು ತಾಯಿ ಪಾರ್ವತಿದೇವಿ ಸಂಕಪ್ಪ ಸಂಕಣ್ಣವರ ನಗರದ ವಿವೇಕಾನಂದ ನಗರದ ಉರ್ದು ಶಾಲೆಯ ಬೂತ್ ಸಂಖ್ಯೆ-66ರಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಮಂಗಳವಾರ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗದಗ ಜಿಲ್ಲಾ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಭಾಗ್ಯಶ್ರೀ ಕುರುಡಗಿ ದಂಪತಿಗಳು, ರಾಜು ಕುರುಡಗಿಯವರ ಮಾತೋಶ್ರೀ ಶಿವವ್ವ, ಮಕ್ಕಳಾದ ಕರಣ, ಅಭಿಷೇಕ ಕುರುಡಗಿ ಇವರು ನಗರದ ಹಳೇ ಬಸ್ ನಿಲ್ದಾಣದ ಹತ್ತಿರವಿರುವ ಸರಕಾರಿ ಮಾದರಿಯ ಉರ್ದು ಶಾಲೆ ನಂ. 2ರ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಮಂಗಳವಾರ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಲಕ್ಷ್ಮೇಶ್ವರದ ಮತಗಟ್ಟೆ ಸಂಖ್ಯೆ-87ರಲ್ಲಿ ಮತದಾನ ಮಾಡಿದರು.
ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾವೇರಿ-ಗದಗ ಮತಕ್ಷೇತ್ರದ ಲಕ್ಷ್ಮೇಶ್ವರದ ಮತಗಟ್ಟೆ ಸಂಖ್ಯೆ 109ರಲ್ಲಿ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ತಂದೆ, ಮುಖಂಡ ಜಿ.ಎಸ್. ಗಡ್ಡದೇವರಮಠ ಮತ ಚಲಾಯಿಸಿದರು.
ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಮುಖಂಡ ನಿಂಗನಗೌಡ ಎಸ್.ಮಾಲಿಪಾಟೀಲ್ ಗದಗ ಹುಡ್ಕೋ ನಗರದ 34ನೇ ವಾರ್ಡಿನಲ್ಲಿರುವ ಶ್ರೀ ಬಸವೇಶ್ವರ ಸ್ಕೂಲ್ ಮತಗಟ್ಟೆಯಲ್ಲಿ ತಮ್ಮ ಕುಟುಂಬದೊಂದಿಗೆ ಮತದಾನ ಮಾಡಿದರು.
ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡ, ಉದ್ಯಮಿ ವಿಜಯಕುಮಾರ ಗಡ್ಡಿ ಹಾಗೂ ಅವರ ಪತ್ನಿ, ನಗರಸಭೆ ಸದಸ್ಯೆ ಅನಿತಾ ವಿಜಯಕುಮಾರ ಗಡ್ಡಿಯವರು ನಗರದ ರೆಡ್ಡಿ ಕಾಲೇಜ್ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿಯ ಕುಸುಗಲ್ ರಸ್ತೆಯ SBI ಶಾಲೆಯ ಮತಗಟ್ಟೆಯಲ್ಲಿ ಶಾಸಕ ಪ್ರದೀಪ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕುಟುಂಬದವರು ಮತದಾನ ಮಾಡಿದರು.
ಗದಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ನಗರಸಭೆ ಸದಸ್ಯೆ ಲಲಿತಾ ಬ.ಅಸೂಟಿ ಅವರು ವಾರ್ಡ್ ನಂ-೨೭ರ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.