ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಸೋಮವಾರ ದಿ 14 ರಂದು 96 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
96 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7653 ಕ್ಕೇರಿದೆ. ಸೋಮವಾರ 184 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6453 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1091 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಮವಾರದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 109 ಕ್ಕೇರಿದೆ.
ಗದಗ-35, ಮುಂಡರಗಿ-12, ನರಗುಂದ-13, ರೋಣ-08, ಶಿರಹಟ್ಟಿ-18, ಹೊರ ಜಿಲ್ಲೆಯ 10 ಪ್ರಕರಣ ಸೇರಿದಂತೆ ಒಟ್ಟು 96 ಜನರಿಗೆ ಸೋಂಕು ದೃಢಪಟ್ಟಿದೆ.
ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…
ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಜವಳ ಗಲ್ಲಿ, ವಾಟರ ಟ್ಯಾಂಕ್ ಹತ್ತಿರ, ಬಸವೇಶ್ವರ ನಗರ, ಹುಡ್ಕೋ ಕಾಲೋನಿ, ತಾಜ್ ನಗರ, ಜಿಮ್ಸ್, ಕಬಾಡಿ ಚಾಳ, ಮಹಾಂತೇಶ ನಗರ, ಬಾಪೂಜಿ ನಗರ, ಬ್ಯಾಂಕರ್ಸ್ ಕಾಲೋನಿ, ವಿವೇಕಾನಂದ ನಗರ,
ಶಿವಾನಂದ ನಗರ, ಗಂಗಿಮಡಿ, ರಾಜೀವಗಾಂಧಿ ನಗರ, ಸಾಯಿಬಾಬಾ ದೇವಸ್ಥಾನದ ಹತ್ತಿರ,
ಗದಗ ತಾಲೂಕಿನ ಮುಳಗುಂದ, ಹುಲಕೋಟಿ, ಲಕ್ಕುಂಡಿ, ನಾಗಸಮುದ್ರ, ಕುರ್ತಕೋಟಿ,
ಮುಂಡರಗಿ ಪಟ್ಟಣದ ಜೆ.ಟಿ.ಮಠ ರಸ್ತೆ, ಮುಂರಡಗಿ ತಾಲೂಕಿನ ಹಿರೇವಡ್ಡಟ್ಟಿ, ನರಗುಂದ ಪಟ್ಟಣದ ದಂಡಾಪುರ ಓಣಿ, ರಾಚಯ್ಯ ನಗರ, ನರಗುಂದ ತಾಲೂಕಿನ ಹದ್ಲಿ, ಸೋಮಾಪುರ, ಚಿಕ್ಕ ನರಗುಂದ ರೋಣ ತಾಲೂಕಿನ ಸೂಡಿ, ಜಕ್ಕಳಿ,
ಗಜೇಂದ್ರಗಡ ಪಟ್ಟಣದ ಭೂಮರೆಡ್ಡಿ ಪ್ಲಾಟ, ವಿದ್ಯಾನಗರ, ಶಿರಹಟ್ಟಿ ಪಟ್ಟಣದ ಶಿವಲಿಂಗೇಶ್ವರ ನಗರ, ರಾಘವೇಂದ್ರ ಮಠ, ವಿಜಯನಗರ, ಸೇವಾನಗರ, ಶಿರಹಟ್ಟಿ ತಾಲೂಕಿನ ನಾರಾಯಣಪುರ, ಬೆಳ್ಳಟ್ಟಿ, ವಡವಿ, ಸುಗ್ನಳ್ಳಿ, ಶಿಗ್ಲಿ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಕೆರಿ,