ಗದಗ ಕ್ಷೇತ್ರದ ಮಹಾಜನತೆಗೆ ನಮಸ್ಕಾರ್,
ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಗೆ ಒಳಗಾಗಲು ತಿಳಿಸಿದ್ದೇನೆ. ಗುಂಪಿನಿಂದ ಪ್ರತ್ಯೇಕವಾಗಿರಲು ಸೂಚಿಸಿದ್ದೇನೆ. ಕೊರೊನಾ ಎರಡನೇ ಅಲೆ ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ಮೊದಲನೇ ಅಲೆಗಿಂತಲೂ ಹೆಚ್ಚಿನ ಪ್ರಾಣಹಾನಿ ಉಂಟು ಮಾಡುತ್ತಿದೆ. ಕೊರೊನಾ ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಹಾಗೂ ನಿಮ್ಮ ಕುಟುಂಬ ಸುರಕ್ಷಿತವಾಗಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೆನೆ. ನಿಮ್ಮ ಆಶೀರ್ವಾದಿಂದ ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಇಂದು ಚನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ತೆರಳಿದ್ದೇನೆ.
ಇಂತಿ ನಿಮ್ಮ
ಅನಿಲ ಪಿ. ಮೆಣಸಿನಕಾಯಿ
ಗದಗ ಮತಕ್ಷೇತ್ರ
ಇದನ್ನೂ ಓದಿ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿಗೆ ಕೊರೊನಾ



