ಗುರುತೇ ಸಿಗದಂತೆ ಬದಲಾದ ಸಮಂತಾ: ನೆಚ್ಚಿನ ನಟಿಯನ್ನು ನೋಡಿ ಶಾಕ್‌ ಆದ ಫ್ಯಾನ್ಸ್

0
Spread the love

ಟಾಲಿವುಡ್​ ಸ್ಟಾರ್​ ನಟಿ ಸಮಂತಾ ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಖಾಸಗಿ ವಿಚಾರವಾಗಿಯೇ ಸುದ್ದಿಯಾಗೋ ನಟಿ ತಮ್ಮ ಸೌಂದರ್ಯದ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ, ಆದ್ರೆ ಇದೀಗ ಸಮಂತಾ ಅವರ ಹೊಸ ಅವತಾರ ನೋಡಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಇದು ನಮ್ಮ ಸಮಂತಾನ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

Advertisement

ಸದ್ಯ ಸಮಂತಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ವಿಭಿನ್ನವಾದ ಹೇರ್‌ಸ್ಟೈಲ್‌ನೊಂದಿಗೆ ಫೋಟೋಶೂಟ್ ಮಾಡಿಸಿ ಶಾಕ್​ ಕೊಟ್ಟಿದ್ದಾರೆ. ಸಮಂತಾ ಸದ್ಯಕ್ಕೆ ಸಿನಿಮಾದ ಕೆಲಸಗಳಿಗೆ ಬ್ರೇಕ್‌ ಹಾಕಿದ್ದಾರೆ. ಇತ್ತೀಚೆಗೆ ವಿಶ್ವ ಪಿಕಲ್ ಬಾಲ್ ಲೀಗ್​​​ನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಶಾಕ್​ ಕೊಟ್ಟಿದ್ದರು.

ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಸಿನಿಮಾರಂಗದಿಂದ ದೂರವಾಗಿದ್ದಾರೆ. ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರುಮಾಡಿದ್ದಾರೆ. ಸಮಂತಾ ಬಾಲಿವುಡ್‌ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.  ಈ ನಡುವೆ ನಟಿ ಸಮಂತಾ ಅಚ್ಚರಿಯ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಚಿಕ್ಕ ಕೂದಲಿನೊಂದಿಗೆ ಪುರುಷನಂತೆ ಕಾಣಿಸಿಕೊಂಡಿದ್ದಾರೆ. ಆದ್ರೆ ಈ ಹೊಸ ಲುಕ್ ಸಿನಿಮಾಗಾಗಿ ಅಲ್ಲ, ಪ್ರಸಿದ್ಧ ಹಾಲಿವುಡ್ ಪತ್ರಿಕೆಯ ಮುಖಪುಟಕ್ಕಾಗಿ ಸಮಂತಾ ಹೀಗೆ ಬದಲಾಗಿದ್ದಾರೆ ಎನ್ನಲಾಗಿದೆ. ಹಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆಯಲು ಹೀಗೆ ಫೋಟೋಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here